ಕುಂಬಳೆ: ಯುವಕನನ್ನು ಆಟೋ ರಿಕ್ಷಾದಲ್ಲಿ ಉಪಾಯದಿಂದ ಕರೆದೊಯ್ದು ಇಬ್ಬರು ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಬಳಿಕ ರಸ್ತೆ ಬದಿ ಉಪೇಕ್ಷಿಸಿ ಪರಾರಿಯಾದ ಬಗ್ಗೆ ದೂರಲಾಗಿದೆ.
ಉಪ್ಪಳ ಪತ್ವಾಡಿಯ ಸವಾದ್ (23) ಎಂಬವರು ಹಲ್ಲೆಯಿಂದ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ದ್ದಾರೆ. ಸವಾದ್ ಮಾಂಸದಂಗಡಿಯ ಕಾರ್ಮಿಕನಾಗಿದ್ದಾರೆ.
ನಿನ್ನೆ ಸಂಜೆ ಇಬ್ಬರು ವ್ಯಕ್ತಿಗಳು ಇವರನ್ನು ಸಂಪರ್ಕಿಸಿ ಬಳಿಕ ಮಾತನಾಡಲಿಕ್ಕಿದೆಯೆಂದು ತಿಳಿಸಿ ಆಟೋ ರಿಕ್ಷಾದಲ್ಲಿ ಕರೆದೊಯ್ದಿದ್ದಾರೆ. ಬಳಿಕ ಉಪ್ಪಳ ಮಜಲ್‌ಗೆ ತಲುಪಿಸಿ ಅಲ್ಲಿ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದು, ಇದರಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಸವಾದ್‌ರನ್ನು ದುಷ್ಕರ್ಮಿಗಳು ರಸ್ತೆ ಬದಿ ಉಪೇಕ್ಷಿಸಿ ಪರಾರಿಯಾಗಿದ್ದಾರೆ ನ್ನಲಾಗಿದೆ. ರಸ್ತೆ ಬದಿ ಬಿದ್ದಿದ್ದ ಸವಾದ್‌ರನ್ನು ಸ್ಥಳೀಯರು ಮೊದಲು ಉಪ್ಪಳದ ಆಸ್ಪತ್ರೆಗೂ ಬಳಿಕ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದ್ದಾರೆ. ಪತ್ವಾಡಿಯ ಇರ್ಫಾನ್ ಹಾಗೂ ಅನಸ್ ಎಂಬಿವರು ತನ್ನನ್ನು ಉಪಾಯದಿಂದ ಕರೆದೊಯ್ದು ಹಲ್ಲೆಗೈದಿರುವುದಾಗಿ ಸವಾದ್ ಆರೋಪಿಸಿದ್ದಾರೆ.
ಮಾದಕವಸ್ತು ಮಾರಾಟವನ್ನು ವಿರೋಧಿಸಿದ ದ್ವೇಷದಿಂದ ಹಲ್ಲೆಗೈದಿರು ವುದಾಗಿಯೂ ದೂರಲಾಗಿದೆ. ಇದೇ ವೇಳೆ ಹಲ್ಲೆ ಘಟನೆ ಬಗ್ಗೆ ಕುಂಬಳೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಆದರೆ ದೂರು ಲಭಿಸದ ಹಿನ್ನೆಲೆಯಲ್ಲಿ ಕೇಸು ದಾಖಲಿಸಿಲ್ಲವೆನ್ನಲಾಗಿದೆ. ಸವಾದ್ ಹಾಗೂ ಹಲ್ಲೆಗೈದ ವ್ಯಕ್ತಿಗಳ ಮಧ್ಯೆ ಪೂರ್ವದ್ವೇಷವಿತ್ತೆಂದೂ ಪೊಲೀಸರು ತಿಳಿಸುತ್ತಿದ್ದಾರೆ.






