ಮನೆಯೊಳಗೆ ನಿದ್ರಿಸಿದ್ದ ಬಾಲಕ ನಾಗರ ಹಾವು ಕಡಿತದಿಂದ ಮೃತ್ಯು

ತಿರುವನಂತಪುರ: ರಾಜ್ಯದಲ್ಲಿ ಹಾವಿನ ಕಡಿತದಿಂದ ಇನ್ನೋರ್ವ ಬಾಲಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ತಿರುವನಂತಪುರ ಬಳಿಯ ಚಿರಯಿನ್‌ಕೀಳ್ ನಿವಾಸಿಯಾದ ದಿಲ್ಶನ್ (8) ಎಂಬ ಬಾಲಕ ಮೃತಪಟ್ಟ ದುರ್ದೈವಿಯಾಗಿದ್ದಾನೆ.

ಇಂದು ಮುಂಜಾನೆ 4 ಗಂಟೆ ವೇಳೆ ಮನೆಯೊಳಗೆ ನಿದ್ರಿಸಿದ್ದ ಬಾಲಕನಿಗೆ ನಾಗರಹಾವು ಕಡಿದಿದೆ. ಬಾಲಕನ ಕೂಗುಕೇಳಿ ತಂದೆ ದಿಲೀಪ್, ತಾಯಿ ಅನುಪಮ ಎಚ್ಚೆತ್ತು ನೋಡಿದಾಗ ಬಾಲಕನ ದೇಹದಲ್ಲಿ ಹಾವಿನ ಕಡಿತದ ಗುರುತು ಕಂಡುಬಂದಿದೆ.ಕೂಡಲೇ ಚಿರಯಿನ್‌ಕೀಳ್‌ನ ತಾಲೂಕು ಆಸ್ಪತ್ರೆಗೆ ತಲುಪಿಸಲಾ ಯಿತು. ಅಲ್ಲಿ ಚುಚ್ಚುಮದ್ದು ನೀಡಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮಾಹಿತಿ ಲಭಿಸಿದ ನಾಗರಿಕರು ತಲುಪಿ ಹುಡುಕಾಡಿದಾಗ ಮನೆಯೊಳಗೆ ನಾಗರಹಾವು ಕಂಡುಬಂದಿದೆ. ಇತ್ತೀಚೆಗಷ್ಟೇ ತೃಶೂರು ಕೋಡಾಲಿ ಎಂಬಲ್ಲಿಗೆ ಸಮೀಪದ ಕಡಂಬೋಟ್ ಎಂಬಲ್ಲಿ ನಿದ್ರಿಸಿದ್ದ ಆಲ್‌ಜೋ (8) ಎಂಬ ಬಾಲಕ ಹಾವು ಕಡಿತದಿಂದ  ಸಾವಿಗೀಡಾದ ಘಟನೆ ನಡೆದಿತ್ತು.

You cannot copy contents of this page