ತೃಶೂರು ಪಟಾಕಿ ದುರಂತ: ಇನ್ನೋರ್ವ ಸಾವು; ಮಡಿದವರ ಸಂಖ್ಯೆ 17ಕ್ಕೇರಿಕೆ

ತೃಶೂರು: ತೃಶೂರು ಪೂರಂಗಾಗಿ ಸುಡುಮದ್ದು ತಯಾರಿಸುತ್ತಿದ್ದ ಮುಂಡತ್ತಿಕ್ಕಾಡ್‌ನಲ್ಲಿ  ಉಂಟಾದ ಭಾರೀ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಇನ್ನೋರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

ಮುಂಡತ್ತಿಕ್ಕಾಡಿನ ರಾಜೇಶ್ (38)   ಬೆಳಿಗ್ಗೆ ಸಾವನ್ನಪ್ಪಿದ ವ್ಯಕ್ತಿ. ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದ ಅವರನ್ನು ತೃಶೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ  ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಅಸುನೀಗಿದ್ದಾರೆ. ಇದೇ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಮುಂಡತ್ತಿಕ್ಕಾಡಿನ ಉಣ್ಣಿಕೃಷ್ಣನ್ (58) ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿ ದ್ದರು. ಆ ಮೂಲಕ ಈ ದುರಂತದಲ್ಲಿ  ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ ಈಗ 17ಕ್ಕೇರಿದೆ.

You cannot copy contents of this page