ಪತ್ತನಂತಿಟ್ಟ: ಸಿನಿಮಾ ಸೀರಿಯಲ್ ನಟ ಸಂತೋಷ್ ಕೆ. ನಾಯರ್ (66) ವಾಹನ ಅಪಘಾತದಲ್ಲಿ ಮೃತಪಟ್ಟರು. ಎಂ.ಸಿ.ರಸ್ತೆಯಲ್ಲಿ ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದೆ. ಸಂತೋಷ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಎದುರಿನಿಂದ ಆಗಮಿಸುತ್ತಿದ್ದ ಪಾರ್ಸಲ್ ಲಾರಿಗೆ ಢಿಕ್ಕಿ ಹೊಡೆದಿದೆ. ಕೂಡಲೇ ಅಡೂರಿನ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಚಿಕಿತ್ಸೆ ಮಧ್ಯೆ ಮೃತಪಟ್ಟರು. ಕಾರಿನಲ್ಲಿ ಜೊತೆಗಿದ್ದ ಪತ್ನಿ ಶುಭಶ್ರೀ, ಪಾರ್ಸಲ್ ಲಾರಿ ಚಾಲಕ ಸುಧೀಶ್ ಎಂಬಿವರಿಗೂ ಗಾಯಗಳುಂ ಟಾಗಿದ್ದು ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಸಂತೋಷ್ರ ಕೊನೆಯ ಸಿನಿಮಾವಾಗಿದೆ ‘ಮೋಹಿನಿ ಯಾಟ್ಟಂ’. ಇದು ಈಗ ಥಿಯೇಟರ್ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. 1982ರಲ್ಲಿ ಹೊರ ಬಂದ ‘ಇದ್ ಞಂಙಳುಡೆ ಕಥ’ ಎಂಬ ಸಿನಿಮಾದ ಮೂಲಕ ಅಭಿನ ಯರಂಗಕ್ಕೆ ಪ್ರವೇಶಿಸಿದ್ದರು. ಖಳನಾಯಕ, ನಾಯಕ, ಸಹ ನಟ, ಹಾಸ್ಯನಟರಾಗಿ ರಂಗದಲ್ಲಿದ್ದರು.







