ಕಾಸರಗೋಡು: ಸತತವಾಗಿ ಹೆಚ್ಚು ಸಮಯ ಅಲ್ಟ್ರಾವಯಲೆಟ್ ಕಿರಣಗಳು ದೇಹಕ್ಕೆ ತಗಲುವುದು ಸೂರ್ಯಾಘಾತ ಹಾಗೂ ಚರ್ಮ ರೋಗಗಳಿಗೆ, ನೇತ್ರ ರೋಗಗಳಿಗೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದೆಂದು ಮುನ್ನೆಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಸುರಕ್ಷಾ ಮುನ್ನೆಚ್ಚರಿ ಕೆಗಳನ್ನು ಸ್ವೀಕರಿಸಬೇಕಾಗಿದೆ. ಬೆಳಿಗ್ಗೆ 10ರಿಂದ ಸಂಜೆ 3 ಗಂಟೆವರೆಗಿನ ಸಮಯಗಳಲ್ಲಿ ಗರಿಷ್ಠ ಅಲ್ಟ್ರಾ ವಯಲೆಟ್ ಕಿರಣಗಳು ದಾಖಲಾಗುತ್ತಿದ್ದು, ಈ ಸಮಯಗಳಲ್ಲಿ ಹೆಚ್ಚು ಹೊತ್ತು ದೇಹಕ್ಕೆ ನೇರವಾಗಿ ಸೂರ್ಯಪ್ರಕಾಶ ಸ್ಪರ್ಶಿಸುವುದನ್ನು ಹೊರತುಪಡಿಸಬೇಕು.
ಹೊರಗೆ ಕೆಲಸ ಮಾಡುವವರು, ಸಮುದ್ರದಲ್ಲಿ, ಒಳನಾಡು ಮೀನುಗಾರಿಕೆಗಳಲ್ಲಿ ಏರ್ಪಟ್ಟಿರುವ ಮೀನು ಕಾರ್ಮಿಕರು, ಜಲ ಸಾರಿಗೆಯಲ್ಲಿ ಏರ್ಪಟ್ಟಿರುವವರು, ಬೈಕ್ ಪ್ರಯಾಣಿಕರು, ಪ್ರವಾಸಿಗರು, ಚರ್ಮರೋಗವಿರುವವರು, ನೇತ್ರ ರೋಗವಿರುವವರು, ಕ್ಯಾನ್ಸರ್ ರೋಗಿಗಳು, ಇತರ ರೋಗ ಪ್ರತಿರೋಧ ಸಾಮರ್ಥ್ಯ ಕಡಿಮೆ ಇರುವವರು ಪ್ರತ್ಯೇಕವಾಗಿ ಜಾಗ್ರತೆ ಪಾಲಿಸಬೇಕಾಗಿದೆ. ಹಗಲು ಸಮಯದಲ್ಲಿ ಹೊರಗಿಳಿಯುವಾಗ ಟೊಪ್ಪಿ, ಕೊಡೆ, ಸನ್‌ಗ್ಲಾಸ್ ಎಂಬಿವು ಉಪಯೋಗಿಸಲು ಪ್ರಯತ್ನಿಸಬೇಕು. ದೇಹ ಸಂಪೂರ್ಣ ಮುಚ್ಚುವ ಕಾಟನ್ ಬಟ್ಟೆಗಳನ್ನು ಮಾತ್ರ ಉಪಯೋಗಿಸಬೇಕು.







