ವಿದ್ಯುನ್ಮಾನ ಮತಯಂತ್ರಗಳಿಗೆ ಇನ್ನು ಕಲೆಕ್ಟ್ರೇಟ್‌ನ ಭದ್ರತಾ ಕೊಠಡಿಯಲ್ಲಿ ನಿದ್ದೆ

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಮತದಾನಕ್ಕಾಗಿ ಉಪ ಯೋಗಿಸಿದ ವಿದ್ಯುನ್ಮಾನ ಮತಯಂತ್ರ ಗಳನ್ನು ಕಲೆಕ್ಟ್ರೇಟ್‌ನ ಭದ್ರತಾ ಕೊಠಡಿಗೆ ತಲುಪಿಸಲಾಗಿದೆ. ಮೇ 4ರಂದು ನಡೆದ ಮತ ಎಣಿಕೆಯ ಬಳಿಕ ವಿವಿಧ ಮತ ಎಣಿಕೆ ಕೇಂದ್ರಗಳಿಂದ ಪೊಲೀಸರ ಬಿಗು ಕಾವಲಿನೊಂದಿಗೆ ಕಲೆಕ್ಟ್ರೇಟ್‌ನ ಭದ್ರತಾ ಕೊಠಡಿಗೆ ಈ ಯಂತ್ರಗಳನ್ನು ತಲುಪಿಸ ಲಾಯಿತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇವಿಎಂಗಳು ಕಲೆಕ್ಟ್ರೇಟ್‌ನ ವೇರ್ ಹೌಸ್‌ನಲ್ಲಿ ಸ್ವೀಕರಿಸಿ ತೆಗೆದಿರಿಸಲಾ ಯಿತು. ಎಲ್ಲಾ ಮಂಡಲಗಳ ಮತಯಂ ತ್ರಗಳು ಸೇರಿ ಒಟ್ಟು 1126 ಬ್ಯಾಲೆಟ್ ಯೂನಿಟ್‌ಗಳು, 1136 ಕಂಟ್ರೋಲ್ ಯೂನಿಟ್‌ಗಳು, 1153 ವಿವಿ ಪ್ಯಾಟ್ ಮೆಶಿನ್‌ಗಳು ಇಲ್ಲಿವೆ. ಮತ ಎಣಿಕೆ ಸಂಬಂಧಿಸಿದ ದೂರುಗಳೇನಾದರೂ ಇದ್ದಲ್ಲಿ 45 ದಿನಗಳೊಳಗೆ ದೂರು ಸಲ್ಲಿಸಬೇಕು. ಅದು ಕಳೆದ ಬಳಿಕ ಮುಂದಿನ ಚುನಾವಣೆ ವರೆಗೆ ಮತ ಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿರಿಸಲಾಗುವುದು.

RELATED NEWS

You cannot copy contents of this page