ಕಾಸರಗೋಡು: ಒಂದೇ ಮನೆಯಿಂದ ಏಕ ಕಾಲದಲ್ಲಿ ಕೇರಳ ಪೊಲೀಸ್ ಸೇನೆಯಲ್ಲಿ ಎಸ್‌ಐಗಳಾಗಿ ತರಬೇತಿ ಪೂರ್ತಿಗೊಳಿಸಿ ಸಹೋದ ರರು ಗಮನ ಸೆಳೆದಿದ್ದಾರೆ. ಚುನಾವಣಾ ಕರ್ತವ್ಯ ಮುಗಿಯುವುದರೊಂದಿಗೆ ಈ ಇಬ್ಬರು ಸೇವೆಗೆ ಸೇರ್ಪಡೆಗೊಳ್ಳ ಲಿದ್ದಾರೆ. ಮಡಿಕೈ ಏಚ್ಚಿಕ್ಕಾನಂ ಅಂಚೆ ಕಚೇರಿಯ ಪೋಸ್ಟ್ ಮಾಸ್ತರ್ ವಿ. ತಂಬಾನ್‌ರ ಮಕ್ಕಳಾದ ಮಡಿಕೈ ಪೂತಕ್ಕಾಲ್‌ನ ಇಲ್ಲತ್ತ್ ವಳಪ್ಪಿಲ್ ಟಿ.ಸಿ. ಅಕ್ಷಯ್, ಟಿ.ಸಿ. ಅಜಯ್ ಎಂಬಿವರಿಗೆ ಈ ಅಪೂರ್ವ ಭಾಗ್ಯ ಲಭಿಸಿದೆ. ಎಸ್‌ಐ ನೇಮಕಾತಿ ಲಭಿಸಿದ ಈ ಇಬ್ಬರು 2025 ಎಪ್ರಿಲ್ 3ರಂದು ತೃಶೂರು ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಆರಂಭಿಸಿದ್ದರು. 2026ರಲ್ಲಿ ತರಬೇತಿ ಪೂರ್ತಿಗೊಳಿಸಿ ಪಾಸಿಂಗ್ ಔಟ್ ಪರೇಡ್ ನಡೆಸಿದರು. ಅದರ ಬೆನ್ನಲ್ಲೇ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ಇದರೊಂ ದಿಗೆ ಅಕ್ಷಯ್ ಕಾಸರಗೋಡು ಪೊಲೀಸ್ ಸಬ್ ಡಿವಿಶನ್‌ನಲ್ಲಿ ಹಾಗೂ ತಮ್ಮ ಅಜಯ್ ಬೇಕಲ ಡಿವಿಶನ್‌ನಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ನೇಮಕಗೊಂಡರು. ಈ ಕರ್ತವ್ಯ ಮುಗಿದ ಬಳಿಕ ಇವರು ಎರ್ನಾಕುಳಂ ಜಿಲ್ಲೆಯಲ್ಲಿ ಸೇವೆಗೆ ಸೇರ್ಪಡೆಗೊಳ್ಳಲಿದ್ದಾರೆ.
ಈ ಇಬ್ಬರು ಸಹೋದರರು ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಎಲ್‌ಐಸಿ ಏಜೆಂಟ್ ಆಗಿರುವ ವಿ. ಚಂದ್ರಮತಿ ಇವರ ತಾಯಿಯಾಗಿದ್ದಾರೆ.







