ಬದಿಯಡ್ಕ: ಪಳ್ಳತ್ತಡ್ಕದಲ್ಲಿ ಹಲವು ವರ್ಷಗಳಿಂದ ವ್ಯಾಪಾರಿ ಯಾಗಿರುವ ಅಬ್ದುಲ್ ಶರೀಫ್ (54) ನಿಧನ ಹೊಂದಿದರು. ಅಸೌಖ್ಯ ತಗಲಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇಂದು ಮುಂಜಾನೆ ನಿಧನ ಸಂಭವಿಸಿದೆ. ದಿ| ಕುಂಞಾಲಿಯವರ ಪುತ್ರನಾಗಿರುವ ಇವರು ಅವಿವಾಹಿತನಾಗಿದ್ದಾರೆ.
ಮೃತರು ತಾಯಿ ಆಯಿಷಾ, ಸಹೋದರ ಬಶೀರ್, ಸಹೋ ದರಿಯರಾದ ಫೌಸಿಯಾ, ಸುಬೈದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






