ಕುಂಬ್ಡಾಜೆಯಲ್ಲಿ ಮಳೆಗಾಲಪೂರ್ವ ಸ್ವಚ್ಛತೆಗೆ ಚಾಲನೆ

ಬದಿಯಡ್ಕ: ಆರೋಗ್ಯ ಜಾಗೃತಿಯಂಗವಾಗಿ ಕುಂಬ್ಡಾಜೆ ಪಂಚಾಯತ್, ಕುಟುಂಬ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ನಿನ್ನೆ ಮಾರ್ಪನಡ್ಕ ಪಾಂಚಜನ್ಯ ಸಭಾಂಗಣದಲ್ಲಿ ಆರೋಗ್ಯ ವಿಚಾರ ಸಂಕಿರಣ ಮತ್ತು ಪೇಟೆ ಶುಚೀಕರಣ ಕಾರ್ಯಕ್ರಮ ನಡೆಯಿತು.
ಕುಂಬ್ಡಾಜೆ ಪಂ.ನ ೧೪ ವಾರ್ಡ್ ಗಳಲ್ಲಿ ೧೪ರವರೆಗೆ ವಾರ್ಡ್ ಮಟ್ಟ ದಲ್ಲಿ ಜನಪ್ರತಿನಿದಿsಗಳ ನೇತೃತ್ವದಲ್ಲಿ ಸ್ವಚ್ಛತಾ ಸಪ್ತಾಹವನ್ನು ಆಚರಿಸ ಲಾಗುವುದು. ಇದರಂಗವಾಗಿ ನಡೆದ ವಿಚಾರ ಸಂಕಿರಣ, ಸಭೆ ಮತ್ತು ಗುಂಪು ಚರ್ಚೆಯಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಕುಂಬ್ಡಾಜೆ ಪಂ. ಆರೋಗ್ಯ ಮತ್ತು ಶಿಕ್ಷಣ ವ್ಯವಹಾರಗಳ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ. ಅಧ್ಯಕ್ಷತೆ ವಹಿಸಿದ್ದÄ, ಪಂ.ಅಧ್ಯಕ್ಷೆ ಯಶೋದಾ ಎನ್. ಉದ್ಘಾಟಿಸಿದರು. ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಡಾ. ಸೈಯದ್ ಹಮೀದ್ ಶುಹೈಬ್ ಕ್ರಿಯಾ ಯೋಜನೆ ಮಂಡಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಯನಾ, ಕಲ್ಯಾಣ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಅಬೂಬಕರ್, ಸದಸ್ಯರಾದ ಮಹೇಶ್ ಎ., ಬಿ.ಟಿ.ಅಬ್ದುಲ್ಲಾ ಕುಂಞÂ, ಕೊರಗಪ್ಪ ಬೆಳ್ಳಿಗೆ, ಗೀತಾ ಡಿ, ಬಬಿತಾ ರೇಷ್ಮಾ, ಆಯಿಷತ್ ಮಸಿದಾ.ಪಿ, ಸೌಭಾಗ್ಯಲಕ್ಷ್ಮಿ, ಎಸ್.ಮುಹಮ್ಮದ್, ಕಾರ್ಯದರ್ಶಿ ವಿಪಿನ್, ಡಾ.ಐಶ್ವರ್ಯ ಕೆ., ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಅಧ್ಯಕ್ಷ ಶ್ರೀಧರನ್, ವಿವಿಧ ರಾಜಕೀಯ ಪಕ್ಷಗಳ ಶಶಿಧರ ತೆಕ್ಕೆಮೂಲೆ, ಜಾನ್, ಮ್ಯಾಥ್ಯೂ ಮಾತನಾಡಿದರು. ಆರೋಗ್ಯ ನಿರೀಕ್ಷಕ ಸುರೇಶ್ ಕುಮಾರ್ ‘ವಿಷನ್ ೨೦೨೬’ ಬಗ್ಗೆ ವಿವರಿಸಿದರು. ಜೆಎಚ್‌ಐ. ಅಬ್ದುಲ್ ರಹಿಮಾನ್ ವಂದಿ
ಸಿದರು.

You cannot copy contents of this page