ಕುಂಬಳೆ: 16 ಹಾಗೂ 10 ವರ್ಷ ಪ್ರಾಯದ ಇಬ್ಬರು ಹೆಣ್ಮಕ್ಕಳಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಹೆಣ್ಮಕ್ಕಳ ಮಲತಂದೆಯಾದ ಕಣ್ಣೂರು ಪಾಪಿನಿಶ್ಶೇರಿ ನಿವಾಸಿ ಪ್ರಸ್ತುತ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವಾಟರ್ಸ್ವೊಂದರಲ್ಲಿ ವಾಸಿಸುವ ಮಧ್ಯವಯಸ್ಕನನ್ನು ಪೋಕ್ಸೋ ಪ್ರಕಾರ ಪೊಲೀಸರು ಬಂಧಿಸಿದ್ದಾರೆ. 2024 ಸೆಪ್ಟಂಬರ್ ತಿಂಗಳಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿ ಬಾಲಕಿಯರು ನೀಡಿದ ದೂರಿನಂತೆ ಮಲತಂದೆ ವಿರುದ್ಧ ಎರಡು ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಬಾಲಕಿಯರು ಬೋರ್ಡಿಂಗ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಓಣಂ ರಜೆಯಲ್ಲಿ ತಾಯಿಯ ಕ್ವಾರ್ಟರ್ಸ್ಗೆ ತಲುಪಿದಾಗ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಈ ಘಟನೆಗೆ ಸಂಬಂಧಿಸಿ ಇತ್ತೀಚೆಗೆ ಪೊಲೀಸರಿಗೆ ದೂರು ನೀಡಲಾಗಿದೆ.





