ಅಸೌಖ್ಯ: ಯುವತಿ ನಿಧನ

ಕುಂಬಳೆ: ಕುಂಟಂಗೇರಡ್ಕ ಲಕ್ಷ್ಯಂವೀಡುನಲ್ಲಿ ವಾಸಿಸುತ್ತಿದ್ದ ಯುವತಿ ಅಸೌಖ್ಯ ತಗಲಿ ನಿಧನ ಹೊಂದಿದರು. ದಿ| ಮೊಹಮ್ಮದ್ ಕುಂಞಿ- ಮುತ್ತು ಬೀವಿ ದಂಪತಿ ಪುತ್ರಿ ನೂರ್‌ಜಹಾನ್ (40) ನಿಧನ ಹೊಂದಿದವರು. ಅಸೌಖ್ಯ ತಗಲಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ, ಪತಿ ಅಶ್ರಫ್, ಸಹೋದರರಾದ ಹಂಸ, ಮೊಯ್ದೀನ್ ಕುಂಞಿ, ಅಬ್ದುಲ್ ರಹ್ಮಾನ್, ಇಸ್ಮಾಯಿಲ್,  ಸಹೋ ದರಿಯರಾದ ಸೈನಬ, ಸಫಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಅಶ್ರಫ್, ಸಹೋದರಿಯರಾದ ಸಫೀನ, ನೆಬೀಸ, ಫಾತಿಮ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page