ಮೂರನೇ ಸೀಟಿಗಾಗಿ ಒತ್ತಡ ತಂತ್ರ ಹೇರಲ್ಲ- ಮು.ಲೀಗ್
ಮಲಪುರಂ: ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಯುಡಿಎಫ್‌ನೊಳಗಿನ ಸೀಟು ಹಂಚಿಕೆಯಲ್ಲಿ ನಮಗೆ ಮೂರು ಸೀಟು ಲಭಿಸಿಯೇ ಸಿದ್ಧ ಎಂಬ ಬಿಗಿ ನಿಲುವು ನಾವು ಹೊಂದಿಲ್ಲವೆಂದು ಮುಸ್ಲಿಂ ಲೀಗ್ ಹೇಳಿದೆ.ಮಾತ್ರವಲ್ಲ ಅದಕ್ಕಾಗಿ ಒತ್ತಡ ತಂತ್ರವನ್ನು ಹೇರುವುದಿಲ್ಲ. ಮೂರನೇ ಸೀಟಿಗಾಗಿರುವ ಬೇಡಿಕೆಯನ್ನು ನಾವು ಯುಡಿಎಫ್ ಸಭೆಯಲ್ಲಿ ಮುಂದಿರಿಸಲಿದ್ದೇವೆ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್‌ನ್ನು ಒತ್ತಡಕ್ಕೆ ಸಿಲುಕಿಸುವಂತೆ ಮಾಡುವ ಕ್ರಮ ಮುಸ್ಲಿಂ ಲೀಗ್‌ನಿಂದ ಉಂಟಾಗದು. ವಯನಾಡಿನಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸದೆ ಇದ್ದಲ್ಲಿ ಆ ಸೀಟನ್ನು ನಮಗೆ ನೀಡಬೇಕೆಂದು ಲೀಗ್ ಹೇಳಿದೆ. ಆದರೆ ವಯನಾಡಿನಲ್ಲಿ ರಾಹುಲ್ ಗಾಂಧಿಯನ್ನೇ ಮತ್ತೆ ಕಣಕ್ಕಿಳಿಸಲು ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಹಾಗೆ ನಡೆದಲ್ಲಿ ಕಾಸರಗೋಡು, ಕಣ್ಣೂರು ವಡಗರೆ, ಅಥವಾ ಕಲ್ಲಿಕೋಟೆ ಕ್ಷೇತ್ರಗಳ ಪೈಕಿ ಯಾವುದಾದರೊಂದನ್ನು ಹೆಚ್ಚುವರಿಯಾಗಿ ತಮಗೆ ನೀಡ ಬೇಕೆಂಬ ಬೇಡಿಕೆಯನ್ನು ಮುಸ್ಲಿಂ ಲೀಗ್ ಮುಂದುವರಿಸಿದೆ. ಆದರೆ ವಿಷಯದಲ್ಲಿ ಒತ್ತಡ ತಂತ್ರ ಹೇರುವುದಿಲ್ಲ ಎಂದು ಲೀಗ್ ನೇತಾರರು ತಿಳಿಸಿದ್ದಾರೆ. ತಮ್ಮ ಸೀಟನ್ನು ಬಿಟ್ಟುಕೊಡಲು ಕಾಂಗ್ರೆಸ್ ತಯಾರಾಗದೇ ಇದ್ದಲ್ಲಿ ಮುಸ್ಲಿಂ ಲೀಗ್ ಈಗಿರುವ ಮಲಪ್ಪುರಂ ಮತ್ತು ಮಂಜೇರಿ ಲೋಕಸಭಾ ಕ್ಷೇತ್ರದಲ್ಲಿ ತೃಪ್ತಿ ಪಡಬೇಕಾಗಿ ಬರಲಿದೆ