ತಂದೆಯ ಮಧುಮೇಹದ ಮಾತ್ರೆಗಳನ್ನು ಅಪರಿಮಿತವಾಗಿ ಸೇವಿಸಿದ ಪುತ್ರ ಮೃತ್ಯು

ಕಾಸರಗೋಡು: ತಂದೆ ಮಧುಮೇಹಕ್ಕೆ ಸೇವಿಸುತ್ತಿದ್ದ ಮಾತ್ರೆಗಳನ್ನು ಅಪರಿಮಿತವಾಗಿ ಸೇವಿಸಿದ ಪುತ್ರ ಮೃತಪಟ್ಟನು. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ವೆಸ್ಟ್‌ಎಳೇರಿ, ಪುಂಙಚ್ಚಾಲ್ ಕಾಞಿರುತ್ತುಂಗಾಲ್ ನಿವಾಸಿ ರಾಜು ಕುರ್ಯನ್‌ರ ಪುತ್ರ ಜಿನ್ಸ್‌ರಾಜ್ (28) ಮೃತಪಟ್ಟ ಯುವಕ. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಮೇ 18ರಂದು ಜಿನ್ಸ್‌ರಾಜ್‌ನನ್ನು ಮನೆಯೊಳಗೆ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಮಾಹಿತಿ ತಿಳಿದು ತಲುಪಿದ ಸಂಬಂಧಿಕರು ವೆಳ್ಳೆರಿಕುಂಡ್‌ನ ಆಸ್ಪತ್ರೆಗೆ ತಲುಪಿಸಿ ಸ್ಥಿತಿ ಗಂಭೀರವಾದ ಕಾರಣ ಕೂಡಲೇ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿ ನಡೆಸಿದ ತಪಾಸಣೆಯಲ್ಲಿ ಅಪರಿಮಿತವಾಗಿ ಔಷಧ ಹೊಟ್ಟೆಯೊಳಗೆ ಸೇರಿದುದು ಪತ್ತೆಯಾಗಿತ್ತು. ಬಳಿಕ ಸಂಬಂಧಿಕರು ಮನೆಗೆ ತಲುಪಿ ನೋಡಿದಾಗ ಸಕ್ಕರೆ ಖಾಯಿಲೆಗಿರುವ ಮಾತ್ರೆಯ ಖಾಲಿ ಕವರ್‌ಗಳು ಪತ್ತೆಯಾಗಿವೆ. ಜಿನ್ಸ್‌ರಾಜ್ ಅಪರಿಮಿತ ಮದ್ಯಪಾನಿಯಾಗಿದ್ದನೆಂದು ತಂದೆ ರಾಜು ಕರ್ಯನ್ ವೆಳ್ಳರಿಕುಂಡ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅಪರಿಮಿತವಾಗಿ ಮದ್ಯಪಾನ ಗೈದು ಸಮಸ್ಯೆ ಸೃಷ್ಟಿಸುತ್ತಿದ್ದ ಕಾರಣ ರಾಜು ಕುರ್ಯನ್ ಹಾಗೂ ಪತ್ನಿ ಕರ್ನಾಟಕದಲ್ಲಿ ವಾಸಮಾಡಿ ಟ್ಯಾಪಿಂಗ್ ಕೆಲಸ ನಡೆಸುತ್ತಿದ್ದರು. ಪುತ್ರ ಜಿನ್ಸಿರಾಜ್ ತಳಿಪರಂಬದಲ್ಲಿ ಕೆಲಸದಲ್ಲಿದ್ದನು. ವೆಳ್ಳರಿಕುಂಡ್ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ.

RELATED NEWS

You cannot copy contents of this page