10ರ ಬಾಲಕ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಕೊಚ್ಚಿ: ಹತ್ತರ ಹರೆಯದ ಬಾಲಕನ ಮೃತದೇಹ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಲಯಾಟೂರ್ ಚೆರಿಯಂಪರಂಬಿಲ್ ರಮೇಶನ್- ದಿವ್ಯಾ ದಂಪತಿ ಪುತ್ರ ಆಗತ್ (10) ಮೃತಪಟ್ಟ ಬಾಲಕ. ದಿವ್ಯರ ಮನೆಯ ಮಲಗುವ ಕೊಠಡಿಯ ಫ್ಯಾನ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಗತ್‌ನ ಮೃತದೇಹ ಪತ್ತೆಯಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. 5ನೇ ತರಗತಿ ವಿದ್ಯಾರ್ಥಿಯಾದ ಆಗತ್  ನೇಣು ಬಿಗಿಯಲು ಕಾರಣವೇನೆಂಬುದು ಸ್ಪಷ್ಟಗೊಂಡಿಲ್ಲ.  ಆತ್ಮಹತ್ಯೆಯಾ ಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮಾತ್ರವೇ ಸಾವಿನ ಕಾರಣ ಪತ್ತೆಹಚ್ಚಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page