ಬೆಳ್ಳೂರು: ಕಳೆದ ಕೆಲವು ವರ್ಷಗಳಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಮೃತಪಟ್ಟರು. ಬೆಳ್ಳೂರು ಪಂಚಾಯತ್ನ ಕರ್ಕಟಗೋಳಿ ಕುಂಞಣ್ಣ ಭಂಡಾರಿ (ಬೆಳ್ಳೂರಲ್ಲಿ ಈ ಹಿಂದೆ ಹೋಟೆಲ್ ವ್ಯಾಪಾರಿಯಾಗಿದ್ದರು)ಯವರ ಪುತ್ರಿ ಅಶ್ವಿನಿ ಕೆ. (33)ಮೃತಪಟ್ಟ ಯುವತಿ. ಮೂತ್ರಪಿಂಡ ಸಮಸ್ಯೆ ಹಿನ್ನೆಲೆಯಲ್ಲಿ ಡಯಾಲಿಸಿಸ್ ನಡೆಸಲಾಗುತ್ತಿತ್ತು. ಕಳೆದ ಮೂರು ದಿನದ ಹಿಂದೆ ಅಸೌಖ್ಯ ಉಲ್ಬಣಗೊಂಡು ನಿಧನ ಸಂಭವಿಸಿದೆ.
ಮೃತರು ತಂದೆ, ತಾಯಿ ಜಯಂತಿ, ಪತಿ ಗೋಪಾಲ ಭಂಡಾರಿ, ಸಹೋದರ ರಂಜಿತ್ ಭಂಡಾರಿ, ಸಹೋದರಿ ಅಕ್ಷತ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.






