ಕಾಸರಗೋಡು: ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಬೈಕನ್ನು ಕದ್ದು ಗುಜರಿ ಅಂಗಡಿಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ತೃಕರಿಪುರ ತಟ್ಟಾಚ್ಚೇರಿಯ ಶರ್ಬಾಸ್ ಸುಬೈರ್ (22), ಪಯ್ಯನ್ನೂರು ಪೂಂಜಕ್ಕಾಡ್ ನಿವಾಸಿಗಳಾದ ಮುಹಮ್ಮದ್ ಸಾಬೀತ್ ಪಿ.ವಿ (21) ಮತ್ತು ಮುಹಮ್ಮದ್ ಫವಾಸ್ (21) ಬಂಧಿತ ಆರೋಪಿಗಳು.
ಕಳೆದ ಸೋಮವಾರ ಬೆಳಿಗ್ಗೆ ತೃಕರಿಪುರ ವಳಂಬಚ್ಚಿ ನಿವಾಸಿ ಹಾಗೂ ಅಧ್ಯಾಪಕರಾಗಿರುವ ಪಿ.ವಿ. ಪ್ರಶೋಬ್ ಬೈಕನ್ನು ತೃಕರಿಪುರ ರೈಲು ನಿಲ್ದಾಣದ ಪರಿಸರದಲ್ಲಿ ಪಾರ್ಕ್ ಮಾಡಿದ್ದರು. ಅವರು ರಾತ್ರಿ ಹಿಂತಿರುಗಿದಾಗ ಬೈಕ್ ನಾಪತ್ತೆಯಾದ ವಿಷಯ ಗಮನಕ್ಕೆ ಬಂದಿದೆ. ಆ ಬಗ್ಗೆ ನೀಡಿದ ದೂರಿನಂತೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ರೈಲು ನಿಲ್ದಾಣದ ಪೊಲೀಸ್ ಕ್ಲಬ್ ಸ್ಥಾಪಿಸಿದ್ದ ಸಿಸಿ ಟಿವಿ ಕ್ಯಾಮರದಲ್ಲಿ ಬೈಕ್ ಕದ್ದ ಆರೋಪಿಗಳ ದೃಶ್ಯ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ಚಂದೇರ ಪೊಲೀಸ್ ಠಾಣೆಯ ಎಸ್ಐ ವಿಷ್ಣು ಎಸ್. ನಾಯರ್, ಪ್ರೊಬೇಷನರಿ ಎಸ್ಐ ಸತೀಶ್, ಎಎಸ್ಐಗಳಾದ ರಾಜೇಶ್ ಎಂ, ಪ್ರಮೋದ್ ಕುಮಾರ್, ಎಸ್ಸಿಪಿಒಗಳಾದ ಶಿವಕುಮಾರ್, ಅಮಲ್ ರಾಮ ಚಂದ್ರನ್, ಪ್ರಶೋಬ್ ಕುಮಾರ್, ಸುನಿಲ್ ಕುಮಾರ್ ಕೆ.ಎಂ ಮತ್ತು ಸಜಿತ್ ಕುಮಾರ್ ಎಂಬವರ ನ್ನೊಳಗೊಂಡ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆ ಬಗ್ಗೆ ಪೊಲೀ ಸರು ನಡೆಸಿದ ಮುಂದಿನ ತನಿಖೆಯಲ್ಲಿ ಕದ್ದ ಬೈಕನ್ನು ಅನ್ನೂರಿನ ಗುಜರಿ ಅಂಗಡಿಯೊಂ ದಕ್ಕೆ ಮಾರಾಟ ಮಾಡಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.






