ಮಂಜೇಶ್ವರ: ಕಡಂಬಾರು ಚೆಂಬಪದವು ನಿವಾಸಿ ಹಿರಿಯ ಬಡಗಿ ಕನಿಲ ಜಯಂತ ಆಚಾರ್ಯ (75) ನಿಧನ ಹೊಂದಿದರು. ಅಸೌಖ್ಯ ತಗಲಿದ್ದ ಇವರು ನಿನ್ನೆ ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ಕ್ಷೇತ್ರದ ಮಾಜಿ ಮೊಕ್ತೇಸರರಾಗಿದ್ದರು. ಮೃತರು ಪತ್ನಿ ಅನಸೂಯ, ಸಹೋದರ ಹರಿಶ್ಚಂದ್ರ ಆಚಾರ್ಯ, ಸಹೋದರಿ ರಾಜೀವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಾಲ್ಕು ಸಹೋದರರು ಈ ಹಿಂದೆ ನಿಧನ ಹೊಂದಿದ್ದಾರೆ. ಅಂತ್ಯಸAಸ್ಕಾರ ನಿನ್ನೆ ಮಧ್ಯಾಹ್ನ ರಾಮತ್ತಮಜಲು ರುದ್ರಭೂಮಿಯಲ್ಲಿ ನಡೆಯಿತು.






