ತಿರುವನಂತಪುರ: ಮಿಲ್ಮಾ ಹಾಲಿನ ಬೆಲೆ ಪ್ರತೀ ಲೀಟರ್‌ಗೆ ತಲಾ 4ರೂ.ನಂತೆ ಹೆಚ್ಚಿಸಲು ಮಿಲ್ಮಾದ ನಿರ್ದೇಶಕ ಮಂಡಳಿ ಸಭೆ ತೀರ್ಮಾನಿಸಿದೆ. ಈ ಹೆಚ್ಚಳ ಜೂನ್ ೧ರಿಂದ ಜ್ಯಾರಿಗೆ ಬರಲಿದೆ. ಇದಕ್ಕೆ ಹೊಂದಿಕೊಂಡು ಮಿಲ್ಮಾ ಇತರ ಉತ್ಪನ್ನಗಳ ಬೆಲೆಯೂ ಹೆಚ್ಚಾಗಲಿದೆ.
ಈ ತೀರ್ಮಾನದಂತೆ ಹೋಮೋ ಜೆನೈಸ್ಡ್ ಟೋನ್ಡ್ ಹಾಲಿನ ಅಧ ಲೀಟರ್‌ನ ಬೆಲೆ 28 ರೂ.ಗೇರಲಿದೆ. ಹೀಗೆ ಹೆಚ್ಚಿಸಲಾಗುವ 4 ರೂ.ನಲ್ಲಿ 3ರೂ 35 ಪೈಸೆ ಹೈನುಗಾರಿಕಾ ಕೃಷಿಕರಿಗೆ, 26 ಪೈಸೆ ಹೈನುಗಾರಿಕಾ ಸೊಸೈಟಿಗೆ ಹಾಗೂ ಬಾಕಿ ಹಣ ಮಿಲ್ಮಾ ಮಂಡಳಿಗೆ ಲಭಿಸಲಿದೆ ಎಂದು ಮಂಡಳಿ ಅಧ್ಯಕ್ಷ ಕೆ.ಎಸ್.ಮಣಿ ತಿಳಿಸಿದ್ದಾರೆ. ಈ ದರ ಏರಿಕೆಯಿಂದಾಗಿ ಹೈನುಗಾರಿಕಾ ಕೃಷಿಕರಿಗೆ ಇನ್ನು ಲೀಟರೊಂದಕ್ಕೆ 43.39 ರೂ. ನಂತೆ ಲಭಿಸಲಿದೆ.





