ಅಂಗಡಿಗೆ ನುಗ್ಗಿ ವ್ಯಾಪಾರಿಗೆ ಹಲ್ಲೆ: ಮೂವರ ವಿರುದ್ಧ ಕೇಸು ದಾಖಲು

ಬದಿಯಡ್ಕ: ಅಂಗಡಿಗೆ ನುಗ್ಗಿ ವ್ಯಾಪಾರಿಗೆ ಹಲ್ಲೆ ನಡೆಸಿ 65,000 ರೂ. ನಷ್ಟಗೊಳಿಸಿದ ದೂರಿನಂತೆ ಮೂವರ ವಿರುದ್ದ ಬದಿಯಡ್ಕ ಪೊಲೀ ಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.

ದ.ಕ. ಜಿಲ್ಲೆಯ ಪುತ್ತೂರು ಬೆಟ್ಟಂ ಪಾಡಿ ಕುಟ್ಟತ್ತನ ಹೌಸ್‌ನ ಮೊಹ ಮ್ಮದ್ ಅಶ್ರಫ್ ಕೆ.ಎಂ  ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಗಣೇಶನ್, ಅವಿನಾಶ್ ಮತ್ತು ಇನ್ನೋರ್ವ ಸೇರಿದಂತೆ ಮೂರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರುಗಾರ ವಹಮ್ಮದ್ ಅಶ್ರಫ್ ಪೆರ್ಲದಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಮೇ 19ರಂದು ಸಂಜೆ ಮೂವರು ಆರೋಪಿಗಳು ಅಂಗಡಿಗೆ ಬಂದು ಸರಳು ಮತ್ತು ಕೈಯಿಂದ ಹೊಡೆದು ಬೆದರಿಕೆಯೊಡ್ಡಿದರೆಂದೂ ಆಗ ಅಲ್ಲಿದ್ದ ತನ್ನ ಸ್ನೇಹಿತನ ಮೇಲೂ ಆರೋಪಿಗಳು ಹಲ್ಲೆ ನಡೆಸಿದರು. ಆವೇಳೆ ತನ್ನ ಕೈವಶವಿದ್ದ ೬೫,೦೦೦ ರೂ.ನಷ್ಟಗೊಂಡಿತ್ತೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮೊಹಮ್ಮದ್ ಅಶ್ರಫ್ ಆರೋಪಿಸಿದ್ದಾರೆ.

You cannot copy contents of this page