ಹಾಡಹಗಲೇ ಮನೆಗೆ ನುಗ್ಗಿ ಗೃಹಿಣಿಗೆ ಅತ್ಯಾಚಾರ ಕುಂಬಳೆ ಜವುಳಿ ಅಂಗಡಿ ನೌಕರನ ವಿರುದ್ಧ ಕೇಸು

ಕುಂಬಳೆ:  ಬಟ್ಟೆಬರೆ ಖರೀದಿಸಲು ತಲುಪಿದ ಸಂದರ್ಭದಲ್ಲಿ ಪರಿಚಯ ಗೊಂಡ 42ರ ಹರೆಯದ ಗೃಹಿಣಿಯನ್ನು ಹಾಡಹಗಲೇ ಮನೆಗೆ ನುಗ್ಗಿ  ಅತ್ಯಾಚಾರ ನಡೆಸಿರುವುದಾಗಿ ದೂರಲಾಗಿದೆ.  ಕುಂ ಬಳೆಯ  ಜವುಳಿ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಅಗಿರುವ ಕಳತ್ತೂರು ಜುಮಾ ಮಸೀದಿ  ರಸ್ತೆ ನಿವಾಸಿಯಾದ ಸಹದ್ (26) ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಅತ್ಯಾಚಾರ ಸಂಬಂಧ ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಬಟ್ಟೆಬರೆಗಳನ್ನು ಖರೀದಿಸಲು ತಲುಪಿದ ಸಂದರ್ಭದಲ್ಲಿ 42ರ ಹರೆಯದ ಗೃಹಿಣಿಯನ್ನು ಸಹದ್ ಪರಿಚಯಗೊಂಡಿದ್ದನು. ಅನಂತರ ಆಕೆಯೊಂದಿಗೆ ಸ್ನೇಹ ಬೆಳೆಸಿ ಸೌಹಾ ರ್ದತೆಯಲ್ಲಿದ್ದನೆಂದು ಹೇಳಲಾಗುತ್ತಿದೆ. ೨೦೨೫ ಅಗೋಸ್ತ್  ತಿಂಗಳ ಒಂದು ದಿನ ಮಧ್ಯಾಹ್ನ 12.30ಕ್ಕೆ ಯುವತಿಯ ಮನೆಗೆ ಅತಿಕ್ರಮಿಸಿ ನುಗ್ಗಿದ ಸಹದ್ ಆಕೆಯನ್ನು ಅತ್ಯಾಚಾರಗೊಳಿಸಿ ರುವುದಾಗಿ ದೂರಲಾಗಿದೆ. ಆದರೆ ಭಯದಿಂದಈ ವಿಷಯವನ್ನು ಯುವತಿ ಯಾರಲ್ಲೂ ತಿಳಿಸಿರಲಿಲ್ಲ. ಅನಂತರವೂ ಬೆದರಿಕೆಯೊಡ್ಡಿ ಸಹದ್ ಹಲವು ಬಾರಿ ಅತ್ಯಾಚಾರ ನಡೆಸಿರುವುದಾಗಿ ಗೃಹಿಣಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಬೆದರಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

You cannot copy contents of this page