ರೇಶನ್ ಮಾಲಕರಿಂದ ಪ್ರಧಾನ ಅಂಚೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ

ಕಾಸರಗೋಡು: ಆಲ್ ಕೇರಳ ರಿಟೈಲ್ ರೇಶನ್ ಡೀಲರ್ಸ್ ಅಸೋಸಿ ಯೇಶನ್  ಕಾಸರಗೋಡು ತಾಲೂಕು  ಸಮಿತಿ ನೇತೃತ್ವದಲ್ಲಿ   ವಿವಿಧ ಬೇಡಿಕೆ ಮುಂದಿರಿಸಿ ಇಂದು ಬೆಳಿಗ್ಗೆ ಕಾಸರ ಗೋಡು ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು. ಉದುಮ ಶಾಸಕ ಕೆ. ನೀಲಕಂಠನ್ ಉದ್ಘಾಟಿಸಿದರು.  ರೇಶನ್ ವಲಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಾಣ ಬೇಕು, ಡಿಬಿಟಿ ಸಂಪ್ರದಾಯ ಜ್ಯಾರಿ ಗೊಳಿಸಲಿರುವ ಯತ್ನ ಉಪೇಕ್ಷಿಸಬೇಕು, ಎಎವೈ ಕಾರ್ಡ್ ಮಾಲಕರಿಗೆ  ರೇಶನ್ ಸಾಮಗ್ರಿ ಕಡಿತಗೊಳಿಸಲಿರುವ ಯತ್ನ ವನ್ನು ಉಪೇಕ್ಷಿಸಬೇಕು, ಐಎನ್‌ಎಫ್‌ಪಿ ನಿರ್ದೇಶ ಪ್ರಕಾರ ಓರ್ವ ವ್ಯಕ್ತಿಗೆ 13.5 ಕಿಲೋ ಆಹಾರ ಧಾನ್ಯ ಒಂದು ತಿಂಗಳಲ್ಲಿ ನೀಡಲಿರುವ ನಿರ್ದೇಶ ಜ್ಯಾರಿಗೊಳಿಸಬೇಕು, ಸೀಮೆ ಎಣ್ಣೆ, ಸಕ್ಕರೆ  ವಿತರಣೆಯನ್ನು ಕಡಿತಗೊಳಿಸಿದ ಕ್ರಮ ಹಿಂತೆಗೆಯಬೇಕು, ಎಲ್ಲಾ ಕಾರ್ಡ್ ಮಾಲಕರಿಗೂ ನಿಗದಿತ ಬೆಲೆಗೆ 10 ಕಿಲೋ ಆಹಾರ ಧಾನ್ಯ ವಿತರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಸತ್ಯಾಗ್ರಹ ನಡೆಯುತ್ತಿದೆ.  ಸಂಘಟನೆಯ ತಾಲೂಕು ಅಧ್ಯಕ್ಷ ಬಾಲಕೃಷ್ಣ ಬಲ್ಲಾಳ್  ಅಧ್ಯಕ್ಷತೆ ವಹಿಸಿದರು.  ಜಿಲ್ಲಾಧ್ಯಕ್ಷ ಸತೀಶನ್ ಇಡವೇಲಿ ಮುಖ್ಯ ಭಾಷಣ ನಡೆಸಿದರು. ಲೋಹಿತಾಕ್ಷನ್ ಪಿ, ವಿಜಯನ್ ನಾಯರ್, ವಸಂತ ಶೆಣೈ, ಚಂದ್ರನ್ ಚಡವಡ್ಕ,  ರಮೇಶನ್ ಕೋಟೂರು, ಅಬ್ದುಲ್ ಗಫೂರ್, ಶೋಭನ ಮೊದಲಾದವರು ಮಾತನಾಡಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮಾಡಕ್ಕಲ್ ಸ್ವಾಗತಿಸಿ, ಉದಯ ಕುಮಾರ್ ವಂದಿಸಿದರು.

RELATED NEWS

You cannot copy contents of this page