ಭಂಡಾರ ಮೆರವಣಿಗೆ ಸಿದ್ಧತೆ ಮಧ್ಯೆ ದೈವ ಪಾತ್ರಿ ಕುಸಿದುಬಿದ್ದು ಮೃತ್ಯು

ಬದಿಯಡ್ಕ: ದೈವ ಮಹೋತ್ಸವದಂಗವಾಗಿ ಭಂಡಾರ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದ್ದಂತೆ ದೈವಪಾತ್ರಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪೈಕ ನೆಕ್ರಾಜೆ ಪ್ಲಾವಿಂಡಡಿ ನಿವಾಸಿ ಗಂಗಾಧರ (60) ಮೃತಪಟ್ಟ ವ್ಯಕ್ತಿ. ಇವರು  ಪೈಕ ಬಳಿಯ ಬಾಲಡ್ಕದಲ್ಲಿ  ವ್ಯಾಪಾರಿಯೂ ಆಗಿದ್ದಾರೆ.   ಪೈಕ ಬಳಿಯ ತಾಯತ್ತವೀಡು ತರವಾಡಿನ ಸದಸ್ಯನೂ ಆಗಿರುವ ಗಂಗಾಧರ ಶ್ರೀ ವಿಷ್ಣುಮೂರ್ತಿ ದೈವದ ದರ್ಶನಪಾತ್ರಿಯೂ ಆಗಿದ್ದರು.  ಪೈಕ ಬಳಿಯ ತರವಾಡ್‌ವೊಂದರಲ್ಲಿ ನಿನ್ನೆಯಿಂದ   ವಿವಿಧ ದೈವ ಮಹೋತ್ಸವ ಆರಂಭಗೊಂಡಿದೆ. ಇದರಂಗವಾಗಿ ನಿನ್ನೆ ರಾತ್ರಿ ೭ ಗಂಟೆಗೆ  ತಾಯತ್ತವೀಡು ತರವಾಡಿನಿಂದ  ಈ ತರವಾಡಿಗೆ  ದೈವಗಳ ಭಂಡಾರ ಕೊಂಡೊ ಯ್ಯುವ ಕಾರ್ಯಕ್ರಮವಿತ್ತು. ಇದರಂಗವಾಗಿ ಈ ತರವಾಡಿನಲ್ಲಿ ಪೂಜೆ ನಡೆದು ಭಂಡಾರ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದ್ದಂತೆ ಗಂಗಾಧರ   ಕುಸಿದುಬಿದ್ದಿದ್ದರು. ಕೂಡ ಲೇ ಚೆರ್ಕಳದ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ.  ಈ ಬಗ್ಗೆ ಸಂಬಂಧಿಕ ರತೀಶ್ ಪಿ.ಸಿ ಎಂಬವರು ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಮೃತರು ಪತ್ನಿ ಪದ್ಮಾವತಿ, ಮಕ್ಕಳಾದ ಅಶ್ವತಿ, ಅನೀಶ್, ಅಳಿಯ ಲತೀಶ್, ಸಹೋದರ ರವಿಚಂದ್ರನ್, ಸಹೋದರಿ ಸೌದಾಮಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page