ಕುಂಬಳೆ ಪಂ. ಕಚೇರಿ ಕ್ಯಾಂಟೀನ್‌ನ ತ್ಯಾಜ್ಯ ನೀರು ಸಮೀಪದ ಮನೆಗಳ ಅಂಗಳಕ್ಕೆ: ದುರ್ನಾತದಿಂದ ತೀವ್ರ ಸಮಸ್ಯೆ

ಕುಂಬಳೆ: ಕುಂಬಳೆ ಪಂಚಾಯತ್ ಕಚೇರಿ ಕಾಂಪ್ಲೆಕ್ಸ್‌ನ ಕ್ಯಾಂಟೀನ್‌ನ ತ್ಯಾಜ್ಯ ನೀರನ್ನು ತೆರೆದ ಸ್ಥಳಕ್ಕೆ ಹರಿಯಬಿಟ್ಟಿದ್ದು, ಇದರಿಂದ ಸಮೀಪದ ಮನೆಗಳ ಅಂಗಳದಲ್ಲಿ  ತ್ಯಾಜ್ಯ ನೀರು ತುಂಬಿಕೊಂಡಿದೆ. ಮಾತ್ರವಲ್ಲದೆ ಸಮೀಪ ಪ್ರದೇಶಗಳ ದಾರಿಯಲ್ಲೂ ತ್ಯಾಜ್ಯ ನೀರು ತುಂಬಿ ಕೊಂಡಿರುವುದಾಗಿ ದೂರಲಾಗಿದೆ. ತ್ಯಾಜ್ಯ ನೀರಿನ ದುರ್ನಾತದಿಂದಾಗಿ ಸ್ಥಳೀಯರಿಗೆ ಮನೆಯಲ್ಲಿ ವಾಸಿಸ ಲಾಗದ  ಸ್ಥಿತಿಯೂ ಉಂಟಾಗಿದೆ. ಈ ಸಮಸ್ಯೆ  ಸೃಷ್ಟಿಯಾಗಿದ್ದರೂ ಪರಿಹಾರಕ್ಕೆ ಕ್ರಮ ಕೈಗೊಳ್ಳದೆ ಪಂಚಾಯತ್ ಅಧಿಕಾರಿಗಳು ಮೌನವಾಗಿದ್ದಾರೆಂದು  ಸ್ಥಳೀಯರು ದೂರಿದ್ದಾರೆ. ಈಬಗ್ಗೆ ಒಂದು ಮನೆ ಯ ಮಾಲಕ ಕುಂಬಳೆ ಪಂಚಾ ಯತ್ ಹಾಗೂ ಆರೋಗ್ಯ ವಿಭಾಗ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರನ್ನು  ನೌಕರರು ಕಡತದೊಳಗಿರಿಸಿ  ಯಾವುದೇ ಕ್ರಮ ಕೈಗೊಂಡಿಲ್ಲವೆಂದೂ ಆರೋಪಿಸಲಾಗಿದೆ.

ಕ್ಯಾಂಟೀನ್‌ನ ತ್ಯಾಜ್ಯ ನೀರನ್ನು ಈ ಮೊದಲು ಪೈಪ್‌ನ ಮೂಲಕ ಹರಿದು ಬಿಡಲಾಗುತ್ತಿತ್ತು.  ಹೋಟೆಲ್‌ನ ತ್ಯಾಜ್ಯದಿಂದಾಗಿ ಈ ಪೈಪ್ ಮುಚ್ಚುಗ ಡೆಗೊಂಡಿದೆ. ಈ ಹಿನ್ನೆಲೆಯಲ್ಲಿ ಪೈಪನ್ನು ತುಂಡರಿಸಿ ತ್ಯಾಜ್ಯನೀರನ್ನು ತೆರೆದು ಬಿಟ್ಟಿರುವುದೇ ಈ ಸಮಸ್ಯೆಗೆ ಕಾರಣವಾಗಿದೆಯೆಂದು ನಾಗರಿಕರು ದೂರಿದ್ದಾರೆ. ಈ ತ್ಯಾಜ್ಯ ನೀರು ಹರಿದು ಸಮೀಪದ ಮನೆಗಳ ಅಂಗಳಕ್ಕೆ ತಲುಪಿದೆ. ಎರಡು ವಾರಗಳಿಂದ ದಾರಿಯಲ್ಲೂ ನೀರು ತುಂಬಿಕೊಂಡಿದ್ದು, ಈ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಪಂಚಾ ಯತ್ ಹಾಗೂ  ಹೋಟೆಲ್‌ನ ಮಾಲಕರಲ್ಲಿ ನಾಗರಿ ಕರು ತಿಳಿಸಿದ್ದರು. ಆದರೆ ಯಾರ ಭಾಗದಿಂದಲೂ ಸಮಸ್ಯೆ ಪರಿಹಾರಕ್ಕೆ ಕ್ರಮ ಉಂಟಾಗಲಿಲ್ಲ. ಪಂಚಾಯತ್‌ನ ಸ್ಥಿತಿಯೇ ಇದಾಗಿದ್ದರೆ ನಾಡಿನಲ್ಲಿ ಶುಚಿತ್ವ ಎಂಬುವುದು ಎಲ್ಲಿರಲಿದೆ ಯೆಂದು ದೂರುಗಾರನಾದ ನಿತ್ಯಾನಂದ ಪೈ ಅಧಿಕಾರಿಗಳಲ್ಲಿ ಪ್ರಶ್ನಿಸಿದ್ದಾರೆ.

RELATED NEWS

You cannot copy contents of this page