ವಿದ್ಯುತ್ ತಂತಿಗೆ ಬಾಗಿದ ಮರ: ಸ್ಥಳೀಯರಲ್ಲಿ ಭೀತಿ

ಉಪ್ಪಳ: ವಿದ್ಯುತ್ ತಂತಿ ಮೇಲೆ ಅಕೇಶಿಯಾ ಮರ ಬಾಗಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಆತಂಕದಿAದ ಸ್ಥಳೀಯರು ಭಯ ಭೀತರಾಗಿದ್ದಾರೆ. ಮಂಗಲ್ಪಾಡಿ ಪಂಚಾಯತ್‌ನ ೮ನೇ ವಾರ್ಡ್ ಬೇಕೂರು ಹಳೇ ಅಂಚೆ ಕಚೇರಿ ಬಳಿಯ ಉಬರ್ಲೆ ರಸ್ತೆಯಲ್ಲಿ ಈ ಆತಂಕದ ಸ್ಥಿತಿ ಉಂಟಾಗಿದೆ. ಈ ಪರಿಸರದಿಂದ ಹಾದು ಹೋದ ವಿದ್ಯುತ್ ತಂತಿ ಮೇಲ್ಭಾಗದಲ್ಲಿ ಬೃಹತ್ ಮರ ಬಾಗಿಕೊಂಡಿದ್ದು, ರೆಂಬೆಗಳು ಗಾಳಿಗೆ ತಂತಿಗೆ ಸ್ಪರ್ಶಿಸುತ್ತಿದೆ. ಇದರಿಂದ ವಿದ್ಯುತ್ ಮೊಟಕುಗೊಳ್ಳುತ್ತಿದೆ. ದಿನನಿತ್ಯ ಮಕ್ಕಳ ಸಹಿತ ಹಲವು ಮಂದಿ ಸಂಚರಿಸುವ ರಸ್ತೆ ಇದಾಗಿದೆ. ಮಳೆಗಾಲದಲ್ಲಿ ಮುರಿದು ಬಿದ್ದು ದುರಂತ ಸಂಭವಿಸುವ ಮೊದಲೇ ಈ ಮರವನ್ನು ತೆರವುಗೊಳಿಸಿ ವಿದ್ಯುತ್ ತಂತಿಗೆ ಹಾಗೂ ಸ್ಥಳೀಯರಿಗೆ ಭದ್ರತೆ ಒದಗಿಸಲು ಸಂಬAಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.

You cannot copy contents of this page