ಶೆಡ್‌ನ ಮೇಲೆ ಮರ ಬಿದ್ದು ನಿದ್ರಿಸುತ್ತಿದ್ದ ಯುವಕ ಮೃತ್ಯು

ತೃಶೂರು: ಶೆಡ್‌ನ ಮೇಲೆ ಮರ ಬಿದ್ದು ನಿದ್ರಿಸುತ್ತಿದ್ದ ಯುವಕ ಮೃತಪಟ್ಟರು. ಮಣಲೂರು ಕಂಬನಿಪಡಿ ನಿವಾಸಿ ದಿ| ಸುಬ್ರನ್‌ರ ಪುತ್ರ ವಿಷ್ಣು (28) ಮೃತಪಟ್ಟ ಯುವಕ.

ಮನೆ ದುರಸ್ತಿ ನಡೆಸುತ್ತಿದ್ದ ಹಿನ್ನಲೆಯಲ್ಲಿ ಮಡಲಿನಿಂದ ಶೆಡ್ ತಯಾರಿಸಿ ಅದರಲ್ಲಿ ಮಲಗುತ್ತಿದ್ದರು. ಬಲವಾದ ಗಾಳಿಗೆ ಹಿತ್ತಿಲಲ್ಲಿದ್ದ ಮರ ಶೆಡ್‌ನ ಮೇಲೆ ಬಿದ್ದು ವಿಷ್ಣು ಅದರಡಿ ಸಿಲುಕಿ ಮೃತಪಟ್ಟಿದ್ದಾರೆ.

ಇಂದು ಬೆಳಿಗ್ಗೆ ನೆರೆಮನೆಯವರು ವಿಷ್ಣುವನ್ನು ಮರದಡಿಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಬಳಿಕ ಅಗ್ನಿಶಾಮಕದಳ ತಲುಪಿ ಮರ ಮುರಿದು ತೆಗೆದು ವಿಷ್ಣುವನ್ನು ಹೊರಕ್ಕೆ ತೆಗೆಯಲಾಗಿದೆ. ಈತನ ಜೊತೆಯಲ್ಲಿ ವಾಸಿಸುತ್ತಿದ್ದ ತಾಯಿ ವಳ್ಳಿಯಮ್ಮ ನೆರೆಮನೆಯಲ್ಲಿ ಮಲಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. 

RELATED NEWS

You cannot copy contents of this page