ಫಿಫಾ ವಿಶ್ವಕಪ್: ಮೊದಲ ದಿನವೇ ಹೈ ಡ್ರಾಮಾ: ಚೊಚ್ಚಲ ಗೆಲುವು ಮೆಕ್ಸಿಕೋಗೆ; ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಜಯ

ಮೆಕ್ಸಿಕೋ ಸಿಟಿ: ವಿಶ್ವದ ಅತೀ ದೊಡ್ಡ ಫುಟ್ಬಾಲ್  ಹಬ್ಬ ಫಿಫಾ ವಿಶ್ವಕಪ್ 2026 ನಿನ್ನೆ ತಡರಾತ್ರಿ ಅದ್ದೂರಿಯಾಗಿ ಆರಂಭಗೊಂಡಿದ್ದು, ಮೊದಲ ದಿನವೇ ಅಭಿಮಾನಿಗಳಿಗೆ  ಭರಪೂರ ಮನರಂಜನೆ ಮತ್ತು ಅಚ್ಚರಿಯ ಘಟನೆಗಳು ಸಾಕ್ಷಿಯಾಗಿವೆ. ಟೂರ್ನಿಯ ಮೊದಲ ದಿನದ ಪಂದ್ಯದಲ್ಲಿ  ಸಾಂಪ್ರದಾಯಿಕ ಶೈಲಿಯ ಆಟವನ್ನು ಬದಿಗಿಟ್ಟು ಆತಿಥೇಯ ತಂಡ ಮೆಕ್ಸಿಕೋ ತನ್ನ ಎದುರಾಳಿ ದಕ್ಷಿಣ ಆಫ್ರಿಕಾ ತಂಡವನ್ನು ಪರಾಭವಗೊಳಿಸಿ  ಗೆಲುವು ಸಾಧಿಸಿದೆ.  ದೇಶದ ಆಟಗಾರರ  ಜೆರ್ಸಿ ನಿಯಮ ಉಲ್ಲಂಘಿಸಿರುವ ಕಾರಣಕ್ಕೆ ದಕ್ಷಿಣ ಆಫ್ರಿಕಾ ತಂಡಕ್ಕೆ  ರೆಡ್ ಕಾರ್ಡ್ ಮೂಲಕ ಎಚ್ಚರಿಕೆಯನ್ನು ನೀಡಲಾಗಿದೆ. ಪಂದ್ಯದ ಅವಧಿಯಲ್ಲಿ  ಉಭಯ ತಂಡದ ಆಟಗಾರರ ನಡುವೆ ತೀವ್ರ ಘರ್ಷಣೆ ನಡೆಯಿತು. ಆ ಹಿನ್ನೆಲೆಯಲ್ಲಿ  ನಿಯಮ ಉಲ್ಲಂಘಿಸಿದ ದಕ್ಷಿಣ ಆಫ್ರಿಕಾ ದ ಇಬ್ಬರು ಮತ್ತು ಮೆಕ್ಸಿಕೋ ತಂಡದ ಓರ್ವ ಸೇರಿದಂತೆ ಮೂವರು ಆಟಗಾರರು ರೆಫರಿ ರೆಡ್ಕಾರ್ಡ್ ತೋರಿಸಿ ಮೈದಾನದಿಂದ ಹೊರಗಟ್ಟಿದ್ದಾರೆ.

ಬಳಿಕ ನಡೆದ ಎರಡನೇ ಟೂರ್ನಿಯಲ್ಲಿ  ಟೆಕ್ ರಿಪಬ್ಲಿಕ್ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಪರಾಭಗೊಳಿಸಿ ದಕ್ಷಿಣ ಕೊರಿಯ ಗೆದ್ದು ಬೀಗಿದೆ.

You cannot copy contents of this page