ಪೈವಳಿಕೆ: ಅಯ್ಯಂಗಾಳಿ ಸಂಸ್ಮರಣೆ ಅಂಗವಾಗಿ ಪೈವಳಿಕೆ ಪಂಚಾಯತ್ ಎಸ್ ಸಿ ಮೋರ್ಚಾ ಸಮಿತಿಯಿಂದ ಏದಾರ್ ಎಸ್ಸಿ ಉನ್ನತಿಯಲ್ಲಿ ಸ್ಮೃತಿ ದಿನಾಚರಿಸಲಾಯಿತು. ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ ಕಯ್ಯಾರ್, ಬಿಜೆಪಿ ಪೈವಳಿಕೆ ಪಂಚಾಯತ್ ಅಧ್ಯಕ್ಷ ಸತ್ಯ ಶಂಕರ ಭಟ್ ಮಲಿವ್ ಅಧ್ಯಕ್ಷತೆ ವಹಿಸಿದರು. ಎಸ್ ಸಿ ಮೋರ್ಚಾ ಮಂಡಲ ಅಧ್ಯಕ್ಷ ರಾಮ ಏದಾರ್, ಮಂಡಲ ಕಾರ್ಯದರ್ಶಿ ರಮೇಶ್ ಎ.ಎಸ್, ಜಿಲ್ಲಾ ಕಾರ್ಯದರ್ಶಿ ಸಂದೇಶ್ ಪೆರ್ವೋಡಿ, ಕೃಷ್ಣರಾಜ್ ಅಟ್ಟೆಗೋಳಿ ಮಾತನಾಡಿದರು. ಅಯ್ಯಂಗಾಳಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ರಮೇಶ್ ಅಟ್ಟೆಗೋಳಿ ಸ್ವಾಗತಿಸಿ, ಕೃಷ್ಣರಾಜ್ ವಂದಿಸಿದರು.






