ನಿರ್ಮಾಣ ನಡೆಯುತ್ತಿದ್ದ ಕಟ್ಟಡದಿಂದ  ಬಿದ್ದು ಕಾರ್ಮಿಕ ಮೃತ್ಯು

ಯುಸೀತಾಂಗೋಳಿ: ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ.ಬೇಳ ವಳಾಂಬ ಹೌಸ್‌ನ ಫ್ರಾನ್ಸಿಸ್ ಪ್ರವೀಣ್ ಡಿ’ಸೋಜಾ (47) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಸಂಜೆ 6ಗಂಟೆಗೆ ಮುಜುಂಗಾವಿನಲ್ಲಿ  ಈ ದುರ್ಘಟನೆ ಸಂಭವಿಸಿದೆ. ಇಲ್ಲಿ ಮನೆಯೊಂದರ ನಿರ್ಮಾಣ ಕೆಲಸ ನಡೆಯುತ್ತಿದ್ದು, ಫ್ರಾನ್ಸಿಸ್ ಪ್ರವೀಣ್ ಡಿ’ಸೋಜಾ ಮೇಸ್ತ್ರಿಯ ಸಹಾಯಕನಾಗಿ  ಕೆಲಸ ನಿರ್ವಹಿಸುತ್ತಿದ್ದರು. ಕೆಲಸ ವೇಳೆ ಆಯತಪ್ಪಿಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಫ್ರಾನ್ಸಿಸ್ ಪ್ರವೀಣ್ ಡಿ’ಸೋಜಾರನ್ನು ಇತರ ಕಾರ್ಮಿಕರು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ  ಜೀವ ರಕ್ಷಿಸಲಾಗಲಿಲ್ಲ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

ದಿವಂಗತರಾದ ಮಾರ್ಸೆಲ್ ಡಿ’ಸೋಜಾ-ಪೌಲಿನ್ ಡಿ’ಸೋಜಾ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿಯರಾದ ಪ್ಯಾಟ್ರಿಕ್ ಡಿ’ಸೋಜಾ, ಮಾರ್ಗರೆಟ್ ಡಿ’ಸೋಜಾ, ಮರಿಯಾ ಡಿ’ಸೋಜಾ, ಲಿಲ್ಲಿ ಡಿ’ಸೋಜಾ, ಪ್ಲಾವಿಯಾ ಡಿ’ಸೋಜಾ,ಮ್ಯಾಕ್ಸಿಂ ಮೆಲ್ವಿನ್ ಡಿ’ಸೋಜಾ, ಪ್ರದೀಪ್ ಡಿ’ಸೋಜಾ, ಬೆನೆಡಿಕ್ಟ್ ಡಿ’ಸೋಜಾ, ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page