10ನೇ ತರಗತಿ ವಿದ್ಯಾರ್ಥಿಯ ನೀರಿನ ಬಾಟ್ಲಿಯಲ್ಲಿ ಸಾರಾಯಿ ಪತ್ತೆ: ಸಹಪಾಠಿಯ ಕೃತ್ಯ

ಕಲ್ಲಿಕೋಟೆ: ಶಾಲಾ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ನಾಡ ಸಾರಾಯಿ ಪತ್ತೆಯಾಗಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯನ್ನು ಪ್ರಶ್ನಿಸಿದಾಗ ಸಹಪಾಠಿಯಾದ ಇನ್ನೋರ್ವ ವಿದ್ಯಾರ್ಥಿ ನೀರಿನ ಬಾಟ್ಲಿಯಲ್ಲಿ ತುಂಬಿಸಿ ಬ್ಯಾಗ್‌ನಲ್ಲಿರಿಸಿರುವುದಾಗಿ ಬಹಿರಂಗಗೊಂಡಿದೆ. ವಿದ್ಯಾರ್ಥಿಯನ್ನು ಪ್ರಶ್ನಿಸಿದಾಗ ನಕಲಿ ಮದ್ಯ ಮಾರಾಟದ ವ್ಯಕ್ತಿಯ ಬಗ್ಗೆ ಮಾಹಿತಿ ಲಭಿಸಿದೆ. ವಿದ್ಯಾರ್ಥಿಯ ಮಲತಂದೆ ಹುಳಿರಸ ನೀಡಿದ್ದು, ಹಲವು ಮಕ್ಕಳಿಗೆ ಸಾರಾಯಿ ಈತ ತಂದು ನೀಡುತ್ತಿರುವುದಾಗಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಶಾಲಾ ಅಧಿಕಾರಿಗಳು ತಾಮರಶ್ಶೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಆ ವ್ಯಕ್ತಿಯ ಮನೆ ಹಾಗೂ ಸಮೀಪದಲ್ಲಿ ತಾಮರಶ್ಶೇರಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ 28 ಲೀಟರ್‌ನಷ್ಟಾಗುವ ಅರ್ಧ ಲೀಟರ್‌ನ 56 ಬಾಟ್ಲಿ ಸಾರಾಯಿ ಪತ್ತೆಯಾಗಿದೆ.

ತಾಮರಶ್ಶೇರಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಚಮನ್‌ಕೇಳನ್ಮೂಲದ ರಬ್ಬರ್ ತೋಟದಲ್ಲಿ ಎರಡು ಗೋಣಿ ಚೀಲಗಳಲ್ಲಾಗಿ ಸಂಗ್ರಹಿಸಿಟ್ಟಿದ್ದ ಸಾರಾಯಿಯನ್ನು ವಶಪಡಿಸಲಾಗಿದೆ. ಅನಧಿಕೃತವಾಗಿ ನಕಲಿ ಮದ್ಯ ಕೈವಶವಿರಿಸಿದ್ದಕ್ಕೆ, ಮದ್ಯ ಶಾಲೆಗಳಿಗೆ ತಲುಪಿಸಿದ ಹಾಗೂ ಅದನ್ನು ಬ್ಯಾಗ್‌ನಲ್ಲಿರಿಸಿದ ವಿದ್ಯಾರ್ಥಿಗಳನ್ನು ಜುವೈನಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದೇ ವೇಳೆ ವಿದ್ಯಾರ್ಥಿಯ ಮಲತಂದೆಯನ್ನು ಪತ್ತೆಹಚ್ಚಲಾಗಲಿಲ್ಲ. ಈತ ತಲೆಮರೆಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page