ಕೇರಳ ಬಜೆಡ್ ೨೦೨೪-೨೦೨೫: ೨೦೨೫ರಲ್ಲಿ ೫ ಲಕ್ಷ ಮನೆ ನಿರ್ಮಾಣ, ಕಾಸರಗೋಡಿನಲ್ಲಿ    ನರ್ಸಿಂಗ್ ತರಬೇತಿ ಕೇಂದ್ರ ಸ್ಥಾಪನೆ

ತಿರುವನಂತಪುರ: ಕೇರಳ ಸರಕಾರದ ೨೦೨೪-೨೫ನೇ ವಿತ್ತೀಯ ವರ್ಷದ ಮುಂಗಡಪತ್ರ (ಬಜೆಟ್)ವನ್ನು ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲನ್ ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಮಂಡಿಸಿದರು.

ಸ್ವಂತವಾಗಿ ಜಮೀನು  ಮತ್ತು ಮನೆಗಳಿಲ್ಲದ ನಿವೇಶನ ರಹಿತರಿಗೆ ಮನೆ ನಿರ್ಮಿಸಿಕೊಡಲು ಲೈಫ್ ಮಿಶನ್ ಯೋಜನೆ-೨೫ಕ್ಕೆ ರೂಪು ನೀಡಲಾ ಗಿದ್ದು, ಇದರಂತೆ  ದೀರ್ಘಕಾಲದ ಸಾಲಗಳನ್ನು ಒಳಪಡಿಸಿ ೫ ಲಕ್ಷದಷ್ಟು ಮನೆಗಳನ್ನು ನಿರ್ಮಿಸಿಕೊಡಲಾಗು ವುದೆಂದು ಸಚಿವರು ತಿಳಿಸಿದ್ದಾರೆ.

ಕಾಸರಗೋಡು ಸೇರಿದಂತೆ ರಾಜ್ಯದ ಐದು  ಜಿಲ್ಲೆಗಳಲ್ಲಿ ನರ್ಸಿಂಗ್ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಮಾತ್ರವಲ್ಲ ಕಾಸರಗೋಡು, ಇಡುಕ್ಕಿ ಮತ್ತು ವಯನಾಡ್ ಜಿಲ್ಲೆಗಳ ಅಭಿವೃದ್ಧಿ ಪ್ಯಾಕೇಜ್‌ಗಾಗಿ ಹೆಚ್ಚುವರಿಯಾಗಿ ೨೦ ಕೋಟಿರೂ.ವನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ. ಲೈಫ್ ಮಿಶನ್ ಯೋಜನೆಗಾಗಿ ಮುಂದಿನ ಎರಡು ವರ್ಷಗಳೊಳಗಾಗಿ ೧೦ ಸಾವಿರಕೋಟಿ ರೂ. ವ್ಯಯಿಸಲಾಗುವುದು. ಭವನ ನಿರ್ಮಾಣ ವಲಯಕ್ಕೆ ೫೭.೬೨ ಕೋಟಿ ರೂ. ಮೀಸಲಿರಿಸಲಾಗಿದೆ. ಎಂ.ಎಲ್ ಲಕ್ಷಂವೀಡ್   ಯೋಜನೆಯಂತೆ  ಹಳೆ ಮನೆಗಳ ನವೀಕರಣೆಗಾಗಿ ಬಜೆಟ್‌ನಲ್ಲಿ ೧೦ ಕೋಟಿ ರೂ. ಮೀಸಲಿರಿಸಲಾಗಿದೆ.  ಇಂತಹ ಯೋಜನೆಗಳಿಗೆ ಕೇಂದ್ರ ಸರಕಾರದ ಸಹಾಯ ಲಭಿಸುತ್ತಿಲ್ಲ. ಅದರಿಂದಾಗಿ ಈ ವಲಯದಲ್ಲಿ ಯಾವುದೇ ರೀತಿಯ ಬ್ರಾಂಡಿಂಗ್ ನೀಡಲಾಗುವುದಿಲ್ಲವೆಂದು ಸಚಿವರು ತಿಳಿಸಿದ್ದಾರೆ. ಪ್ರವಾಸೋದ್ಯಮ ವಲಯದಲ್ಲಿ ೫ಸಾವಿರ ಕೋಟಿ ರೂ. ಗಳ ಯೋಜನೆ ಜ್ಯಾರಿಗೊಳಿಸಲಾಗುವುದು. ರಾಜ್ಯದಲ್ಲಿ ಅಭಿವೃದ್ಧಿ ವಲಯಗಳಿಗೆ ರೂಪು ನೀಡಲಾಗುವುದು. ಕೆ-ರೈಲು  ಯೋಜನೆಯನ್ನು ಸರಕಾರ ಕೈಬಿಟ್ಟಿಲ್ಲ. ಅದನ್ನು ಜ್ಯಾರಿಗೊಳಿಸಲು ಕೇಂದ್ರ ಸರಕಾರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಮುಂದಿನ ಮೂರು ವರ್ಷದೊಳಗಾಗಿ ಮೂರು ಲಕ್ಷಕೋಟಿ ರೂ.ಗಳ ಅಭಿವೃದ್ಧಿ ಯೋಜನೆ ಜ್ಯಾರಿಗೊಳಿಸಲಾಗುವುದು. ಸಾರ್ವಜನಿಕ ಮತ್ತು ಖಾಸಗಿ ವಲಯ ಗಳಲ್ಲಿ ಇನ್ನಷ್ಟು ಹೂಡಿಕೆ ಆಕರ್ಷಿ ಸುವಂತೆ ಮಾಡುವ ಕ್ರಮ ಕೈಗೊಳ್ಳ ಲಾಗುವುದು. ತಿರುವನಂತಪುರ  ವಿಳಿಂಞಂ ಅಂತಾರಾಷ್ಟ್ರೀಯ ಬಂದ ರನ್ನು ಮುಂದಿನ ಮೇ ತಿಂಗಳಲ್ಲಿ ಲೋಕಾರ್ಪಣೆಗೈಯ್ಯಲಾಗುವುದು.  ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯ ಗಳನ್ನು ಆರಂಭಿಸಲಾಗುವುದು. ತೆಂಗು ಕೃಷಿ ಅಭಿವೃದ್ಧಿಗಾಗಿ ೬೫ ಕೋಟಿ ರೂ.ಮೀಸಲಿರಿಸಲಾಗಿದೆ. ೨೫ ಖಾಸಗಿ ಉದ್ದಿಮೆ ಘಟಕಗಳನ್ನು ಆರಂಭಿಸಲಾ ಗುವುದು.  ಹಿರಿಯ ನಾಗರಿಕರಿಗಾಗಿ ಕೇರ್ ಸೆಂಟರ್‌ಗಳನ್ನು ತೆರೆಯಲಾಗು ವುದು. ಒಳನಾಡು ಮೀನುಕೃಷಿಗೆ ೮೦ ಕೋಟಿ ರೂ., ಕಡುಬಡತನ ನಿರ್ಮೂಲನೆಗೆ ಬಜೆಟ್ ನಲ್ಲಿ ೫೦ ಕೋಟಿ ರೂ. ಮೀಸಲಿರಿಸಲಾಗಿದೆ. ೨೦೨೫ ನವಂಬರ್ ತಿಂಗಳೊಳಗಾಗಿ ಕೇರಳವನ್ನು ಕಡುಬಡತನದಿಂದ ಪೂರ್ಣವಾಗಿ ಮುಕ್ತಗೊಳಿಸಲಾಗುವುದು. ಗ್ರಾಮೀಣ ಅಭಿವೃದ್ಧಿಗಾಗಿ ೧೮೬೮.೩೨ ಕೋಟಿ ರೂ., ಕುಟುಂಬಶ್ರೀ ನೇತೃತ್ವದಲ್ಲಿ ವಿಶೇಷ ಉಪಜೀವನ ಯೋಜನೆಗಾಗಿ ೪೩೦ ಕೋಟಿ ರೂ. (ಖಾಸಗಿ ಹೂಡಿಕೆ  ಸೇರಿದಂತೆ) ಮೀಸಲಿರಿಸಲಾಗಿದೆ. ಮನುಷ್ಯ-ವನ್ಯಜೀವಿ ಸಂಘರ್ಷ ಸರಳೀಕರಿಸಲು ೪೮.೮೫ ಕೋಟಿ ರೂ. ಮೀಸಲಿರಿಸ ಲಾಗಿದೆ. ರಾಜ್ಯದಲ್ಲಿ ಶ್ರೀಗಂಧ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಇದಕ್ಕಾಗಿ ಸಂಬಂಧಪಟ್ಟ ಕಾನೂನಿನಲ್ಲಿ ಕಾಲಾನುಸಾರ ರೀತಿಯ ಸುಧಾರಣಾ ಕ್ರಮ ತರಲಾಗುವುದು. ಸಮುದ್ರ ಕರಾವಳಿ ವಲಯಗಳ ಬೆಸ್ತರ ಸುರಕ್ಷೆಗಾಗಿ ೪೦೦ ಕೋಟಿ ರೂ.ಗಳ ‘ಪುನಗಹಂ’ ಯೋಜನೆ, ಬೆಸ್ತರಿಗೆ ೫೦ ಕೋಟಿ ರೂ.ಗಳ ಅಪಘಾತ ವಿಮಾ ಯೋಜನೆ, ಕೃಷಿ ವಿವಿಗೆ ೭೫ ಕೋಟಿ ರೂ., ಹೈನುಗಾರಿಕಾ ಅಭಿವೃದ್ಧಿಗೆ ೧೫೦.೨೫ ಕೋಟಿ ರೂ., ಮೃಗ(ಪಶು ಇತ್ಯಾದಿ) ಪರಿಪಾಲನೆಗೆ ೫೩೫.೯ ಕೋಟಿ ರೂ, ವಿಷರಹಿತ ತರಕಾರಿ ಉತ್ಪಾದನೆಗೆ ೭೮ ಕೋಟಿ ರೂ, ಕೃಷಿ ವಲಯ ಅಭಿವೃದ್ಧಿಗಾಗಿ ೧೬೯೮ ಕೋಟಿ ರೂ., ಭತ್ತ ಕೃಷಿಗೆ ೯೩.೬ಕೋಟಿ ರೂ. ಮೀಸಲಿರಿಸಲಾಗಿದೆ. ಕ್ರೀಡಾ ವಲಯದಲ್ಲಿ ೧೦ ಸಾವಿರ ಉದ್ಯೋಗ ಸೃಷ್ಟಿಸಲಾಗುವುದು. ಮಾತ್ರವಲ್ಲ ಈ ವಲಯದಲ್ಲಿ ೫ ಸಾವಿರ ಕೋಟಿ ರೂ.ಗಳ  ಹೂಡಿಕೆ ಆಕರ್ಷಿಸುವಂತೆ ಮಾಡುವ ಕ್ರಮ ಕೈಗೊಳ್ಳಲಾಗುವುದು.

Leave a Reply

Your email address will not be published. Required fields are marked *

You cannot copy content of this page