ಬದಿಯಡ್ಕ: ಮಾದಕ ವಸ್ತುವಾದ ಎಂಡಿಎಂಎ ಸಹಿತ ಯುವಕನೋರ್ವ ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ಚರ್ಲಡ್ಕ ನಿವಾಸಿ ಅಬ್ದುಲ್ ಜವಾದ್ ಸಿ.ಎಂ. ಬಂಧಿತ ವ್ಯಕ್ತಿ. ಈತನ ಕೈವಶ 0.49 ಗ್ರಾಂ ಮಾದಕ ಪದಾರ್ಥವನ್ನು ವಶಪಡಿಸಲಾಗಿದೆ. ನಿನ್ನೆ ರಾತ್ರಿ 9 ಗಂಟೆ ವೇಳೆ ನೆಲ್ಲಿಕಟ್ಟೆ ಸಮೀಪದ ಚೆನ್ನಡ್ಕದಲ್ಲಿ ಬದಿಯಡ್ಕ ಠಾಣೆ ಎಸ್‌ಐ ರೂಪೇಶ್ ನೇತೃತ್ವದಲ್ಲಿ ಗಸ್ತು ನಡೆಸುತ್ತಿದ್ದಾಗ ಪೊಲೀಸರ ವಾಹನವನ್ನು ಕಂಡು ಓಡಿ ಪರಾರಿಯಾಗಲೆತ್ನಿಸಿದ್ದಾನೆ. ಈ ವೇಳೆ ಶಂಕೆ ತೋರಿ ಬೆನ್ನಟ್ಟಿ ತಪಾಸಣೆ ನಡೆಸಿದಾಗ ಪ್ಯಾಂಟ್‌ನ ಜೇಬಿನಿಂದ ಮಾದಕವಸ್ತು ಪತ್ತೆಯಾಗಿದೆ. ಬಳಿಕ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.






