ಬದಿಯಡ್ಕ: ಮೇಲಿನ ಪೇಟೆ ಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪತ್ನಿಯನ್ನು ಕಳೆದುಕೊಂಡು, ತೀವ್ರ ವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿ ರುವ ಬದಿಯಡ್ಕದ ಪಿಗ್ಮಿ ಏಜೆಂಟ್ ರಾಜೇಶ್ ಬರ್ಲ ಅವರ ಚಿಕಿತ್ಸೆಗೆ ನೆರವಾಗಲು ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ನೇತೃತ್ವದಲ್ಲಿ ‘ಚಿಕಿತ್ಸಾ ಸಹಾಯ ಸಮಿತಿ’ಯನ್ನು ರಚಿಸಲಾಗಿದೆ. ಅಪಘಾತದಲ್ಲಿ ರಾಜೇಶ್ ಅವರ ಪತ್ನಿ ವೀಣಾ ಮೃತಪಟ್ಟಿದ್ದು, ಗಾಯಗೊಂಡಿರುವ 9 ವರ್ಷದ ಪುತ್ರಿ ಚೇತರಿಸಿಕೊಳ್ಳುತ್ತಿದ್ದಾಳೆ. ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜೇಶ್ ಅವರ ಚಿಕಿತ್ಸಾ ವೆಚ್ಚಕ್ಕೆ 15 ಲಕ್ಷ ರೂ.ವಿಗೂ ಅಧಿಕ ಮೊತ್ತದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸಾ ನಿದಿs ಸಂಗ್ರಹಣೆಗಾಗಿ ಸಮಿತಿಯನ್ನು ರಚಿಸಲಾಯಿತು.
ಸಮಿತಿ ಅಧ್ಯಕ್ಷರಾಗಿ ಶಂಕರ ಡಿ., ಸಂಚಾಲಕರಾಗಿ ಬಾಲಕೃಷ್ಣ ಶೆಟ್ಟಿ ಕೆ., ಕೋಶಾದಿsಕಾರಿಯಾಗಿ ರಾಜೇಶ್ ಚಂಬಲ್ತಿಮಾರು ಅವರನ್ನು ಆಯ್ಕೆಮಾಡಲಾಯಿತು. ಅಶ್ವಿನಿ ಕೆ.ಎಂ., ಹಮೀದ್ ಕೆಡೆಂಜಿ, ರಜನಿ ಸಂದೀಪ್, ಅವಿನಾಶ್ ರೈ ಸೇರಿದಂತೆ ವಿವಿಧ ವಾರ್ಡುಗಳ ಜನಪ್ರತಿನಿದಿsಗಳು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಶಂಕರ ಪಾಟಾಳಿ ವಂದಿಸಿದರು.
ರಾಜೇಶ್ ಅವರ ಚಿಕಿತ್ಸಾ ವೆಚ್ಚ ಹಾಗೂ ಇಬ್ಬರು ಹೆಣ್ಣುಮಕ್ಕಳ ಭವಿಷ್ಯದ ದೃಷ್ಟಿಯಿಂದ ದೇಶ-ವಿದೇಶಗಳಲ್ಲಿರುವ ಸಹೃದಯಿ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಮಾನವೀಯತೆಯ ನೆಲೆಯಲ್ಲಿ ಕೈಲಾದ ಆರ್ಥಿಕ ನೆರವನ್ನು ನೀಡಬೇಕೆಂದು ಕಳಿಕಳಿಯಿಂದ ಸಮಿತಿ ವಿನಂತಿಸಿದೆ.
ಧನಸಹಾಯ ನೀಡುವವರು ಬದಿಯಡ್ಕಲ್ಲಿರುವ ಬರೋಡ ಬ್ಯಾಂಕ್ ಶಾಖೆಯ ಪ್ರಶಾಂತ್‌ರ ಹೆಸರಲ್ಲಿರುವ68680100012710 (IFSC: BARB0VJBADI) ಖಾತೆಗೆ ಅಥವಾ ಗೂಗಲ್‌ಪೇ ಮೂಲಕ 9895725455 ಎಂಬ ನಂಬ್ರಕ್ಕೆ ಪಾವತಿಸಬಹುದೆಂದು ಸಮಿತಿ ತಿಳಿಸಿದೆ.






