ಜನವಾಸವಿಲ್ಲದ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಅಯ್ಯಪ್ಪ ವ್ರತಧಾರಿಯ ಸ್ಕೂಟರ್ ಸುಟ್ಟು ಕರಕಲುಗೊಂಡ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಜನವಾಸವಿಲ್ಲದ ಮನೆಯ ಮುಂದೆ ನಿಲ್ಲಿಸಿದ್ದ  ಸ್ಕೂಟರ್ ಸುಟ್ಟು ಕರಕಲುಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರದಲ್ಲಿ ನಡೆದಿದೆ. ಅಯ್ಯಪ್ಪ ವ್ರತಧಾರಿ ಹಾಗೂ ಪ್ಲಂಬರ್ ಕಾರ್ಮಿಕನಾಗಿರುವ ಕಾಸರಗೋಡು ತಾಳಿಪಡ್ಪು ನಿವಾಸಿ ಶೋಭರಾಜ್ ಎಂಬವರು ತಮ್ಮ ಸ್ಕೂಟರನ್ನು ಅಡ್ಕತ್ತಬೈಲು ಅರ್ಜಾಲ್ ರಸ್ತೆಯ ತೋಟತ್ತಡಿಯ ಜನವಾಸವಿಲ್ಲದ ಮನೆಯೊಂದರ ಅಂಗಳದಲ್ಲಿ ನಿನ್ನೆ ನಿಲ್ಲಿಸಿ  ಕೆಲಸಕ್ಕೆ ಹೋಗಿದ್ದರು. ಅಲ್ಲಿಂದ  ಹಿಂತಿರುಗಿದ ವೇಳೆ  ಬೆಂಕಿ ತಗಲಿ ಸಂಪೂರ್ಣ ಕರಕಲುಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಕೂಟರ್‌ಗೆ ಬೆಂಕಿ ಹೇಗೆ ತಗಲಿತ್ತೆಂಬುವುದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ. ಈ ಬಗ್ಗೆ ನೀಡಲಾದ ದೂರಿನಂತೆ  ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಅಗತ್ಯದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

RELATED NEWS

You cannot copy contents of this page