ಕಾಸರಗೋಡು: ಮರ ತುಂಡರಿ ಸುವ ಕೆಲಸದ ಮಧ್ಯೆ ರೆಂಬೆ ಮೈ ಮೇಲೆ ಬಿದ್ದು ಗಂಭೀರ ಗಾಯ ಗೊಂಡ ಕಾರ್ಮಿಕ ಮೃತಪಟ್ಟರು. ಬಂದಡ್ಕ ಪಡ್ಪು ನಡುವಿಲ್ ಪುರ ಕ್ಕಲ್ ನಿವಾಸಿ ಶ್ರೀಶ್ ಕುಮಾರ್ (59) ಮೃತಪಟ್ಟ ದುರ್ದೈವಿ. ಪಾಣತ್ತೂರು ಚಾಮುಂಡಿಕುನ್ನು ಓಟ್ಟಮಲ ಚೇರ್ಣೂರು ಎಂಬಲ್ಲಿನ ವ್ಯಕ್ತಿಯೊಬ್ಬರ ಹಿತ್ತಿಲಿನಲ್ಲಿ ಮರಕಡಿಯುತ್ತಿದ್ದಾಗ ನಿನ್ನೆ ಬೆಳಿಗ್ಗೆ ೧೧ ಗಂಟೆಗೆ ಈ ದುರ್ಘಟನೆ ಸಂಭವಿ ಸಿದೆ. ಮರ ತುಂಡರಿಸುತ್ತಿದ್ದ ವೇಳೆ ರೆಂಬೆ ದೇಹಕ್ಕೆ ಬಿದ್ದು ಶ್ರೀಶ್ ಕುಮಾರ್ ಗಂಭೀರ ಗಾಯಗೊಂ ಡಿದ್ದರು. ಇವರನ್ನು ಕೂಡಲೇ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ತಲುಪಿಸಿ ದಾಖಲಿಸಿದ್ದು, ಆದರೆ ರಾತ್ರಿ ವೇಳೆ ನಿಧನ ಸಂಭವಿಸಿದೆ. ಘಟನೆ ಬಗ್ಗೆ ರಾಜಪುರಂ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.






