ಮಸೀದಿಗೆ ನಮಾಜಿಗೆಂದು ತೆರಳುತ್ತಿದ್ದ ಮುಸ್ಲಿಂ ಲೀಗ್ ನೇತಾರ ಕುಸಿದುಬಿದ್ದು ನಿಧನ

ಬದಿಯಡ್ಕ: ಮಸೀದಿಗೆ ನಮಾಜಿಗೆಂದು ತೆರಳುತ್ತಿದ್ದ ವೇಳೆ ಕುಸಿದುಬಿದ್ದು ಮುಸ್ಲಿಂ ಲೀಗ್ ಮುಖಂಡ ಮೃತಪಟ್ಟ ಘಟನೆ ನಡೆದಿದೆ. ಚೆಂಗಳ ಪಂಚಾಯತ್ ಮಾಜಿ ಸದಸ್ಯ, ಪಂಚಾಯತ್ ಮುಸ್ಲಿಂ ಲೀಗ್  ಕಾರ್ಯಕಾರಿ ಸಮಿತಿ ಸದಸ್ಯ, ನೆಕ್ರಾಜೆ ನಿವಾಸಿ ಕೆ.ಎನ್. ಬಡುವನ್ ಕುಂಞಿ (66) ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ನಮಾಜಿಗೆಂದು ಮಸೀದಿಗೆ ತೆರಳುತ್ತಿದ್ದಾಗ ಕುಸಿದುಬಿದ್ದಿದ್ದು, ಕೂಡಲೇ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿ ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಮೃತರು ಪತ್ನಿ ಆಯಿಶಾ, ಮಕ್ಕಳಾದ ಸಿರಾಜ್, ಅನೈಸ್, ಸಾಬಿರ, ಸುಮಯ್ಯ, ಸಬೀನ, ಸೊಸೆಯಂದಿರಾದ ಬುಶ್ರಾ, ಸಫ್ವಾನ, ಸಹೋದರರಾದ ಕೆ.ಎನ್. ಅಬ್ದುಲ್ಲ ಹಾಜಿ, ಕೆ.ಎಂ. ಹಸೈನಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನಿಬ್ಬರು ಸಹೋದರ ರಾದ ಅಬ್ದುಲ್ ರಹ್ಮಾನ್ ಹಾಜಿ, ಇಬ್ರಾಹಿಂ ಈ ಹಿಂದೆ ನಿಧನಹೊಂದಿದ್ದಾರೆ.

RELATED NEWS

You cannot copy contents of this page