ವಿಕಲಚೇತನ ಬಾಲಕಿಗೆ ಕಿರುಕುಳ: 5 ಪೋಕ್ಸೋ ಕೇಸು ದಾಖಲು; ಆರೋಪಿಗಳಿಗಾಗಿ ಶೋಧ

ಕಾಸರಗೋಡು: ವಿಕಲ ಚೇತನಳಾದ  17ರ ಹರೆಯದ ಬಾಲಕಿಗೆ ದೌರ್ಜನ್ಯವೆಸಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಚೈಲ್ಡ್ ವೆಲ್ಫೇರ್ ಕಮಿಟಿ ನೀಡಿದ ವರದಿಯ ಪ್ರಕಾರ  ಬೇಕಲ ಪೊಲೀಸರು 5 ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ.

ಪಳ್ಳಿಕ್ಕೆರೆ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿ ದೌರ್ಜನ್ಯಕ್ಕೊಳಗಾಗಿರುವುದಾಗಿ ದೂರಲಾಗಿದೆ.  ಮೊದಲು ಓರ್ವ ಆಟೋ ಚಾಲಕ ಕಿರುಕುಳ ನೀಡಿರುವು ದಾಗಿ ಹೇಳಲಾಗುತ್ತಿದೆ. ಅನಂತರ  ಈ ಚಾಲಕನ ಸ್ನೇಹಿತ ಸಹಿತ ೪ ಮಂದಿ ಕಿರುಕುಳ ನೀಡಿರುವುದಾಗಿ ಆರೋಪಿ ಸಲಾಗಿದೆ. ಈ ಬಗ್ಗೆ ಬೇಕಲ ಪೊಲೀಸರಿಗೆ   ಮೊದಲೇ ಸೂಚನೆಗಳು ಲಭಿಸಿತ್ತು. ಆದರೆ ಕೇಸು ದಾಖಲಿಸಿರಲಿಲ್ಲ.  ಆರೋಪ ಮತ್ತೆ ಕೇಳಿಬಂದ ಹಿನ್ನೆಲೆಯಲ್ಲಿ  ಮಾಹಿತಿಯನ್ನು ಚೈಲ್ಡ್ ವೆಲ್ಫೇರ್ ಕಮಿಟಿಗೆ ತಿಳಿಸಲಾಗಿತ್ತು. ಕಮಿಟಿಯ ನೇತೃತ್ವದಲ್ಲಿ  ಇತ್ತೀಚೆಗೆ ಬಾಲಕಿಯನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿ ದಾಗ  ಕಿರುಕುಳ ನೀಡಿರುವ ವಿಷಯ ತಿಳಿದುಬಂದಿದೆ.  ಈ ಬಗ್ಗೆ ವರದಿ ಲಭಿಸಿದ ಬಳಿಕ ಬೇಕಲ ಪೊಲೀಸರು ೫ ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು  ಕಿರುಕುಳಕ್ಕೊಳಗಾದ ಬಾಲಕಿಯಿಂದ ಸಮಗ್ರ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

You cannot copy contents of this page