ಮಂಜೇಶ್ವರ: ಜೋರಾಗಿ ಸುರಿದ ಮಳೆ, ಗಾಳಿಗೆ ಹಳೆಯ ಮನೆಯೊಂದು ಕುಸಿದು ಬಿದ್ದ ಘಟನೆ ನಡೆದಿದೆ. ಮಂಜೇಶ್ವರ ಪಂಚಾಯತ್ನ ಕಟ್ಟೆಬಜಾರ್ ನಿವಾಸಿ ಜಗದೀಶ ಎಂಬವರ ಮನೆ ಕುಸಿದು ಬಿದ್ದಿದೆ. ಮಣ್ಣಿನ ಗೋಡೆ ಹೊಂದಿರುವ ಹೆಂಚು ಹಾಸಿದ ಈ ಮನೆಗೆ ನೂರಕ್ಕೂ ಮಿಕ್ಕು ವರ್ಷಗಳು ಕಳೆದಿರುವುದಾಗಿ ಹೇಳಲಾಗುತ್ತಿದೆ.
ಈ ಮನೆಯಲ್ಲಿ ಜಗದೀಶರವರ ಭಾವ ಮಾತ್ರವೇ ಇದ್ದು, ಇತರರು ಪಕ್ಕದಲ್ಲಿರುವ ಸಂಬAಧಿಕರ ಮನೆಗೆ ತೆರಳಿದ್ದರು. ಮನೆ ಕುಸಿತದಿಂದ ವಿವಿಧ ವಸ್ತುಗಳು ನಾಶಗೊಂಡಿದ್ದು, ವ್ಯಾಪಕ ನಷ್ಟ ಉಂಟಾಗಿರುವುದಾಗಿ ತಿಳಿಸಿದ್ದಾರೆ. ಕುಟುಂಬ ಈಗ ಪರಿಸರದ ಸಂಬAಧಿಕರ ಮನೆಯಲ್ಲಿ ವಾಸವಾಗಿದೆ.







