ಜುಲೈ 6ರಂದು ಖಾಸಗಿ ಬಸ್ ಮುಷ್ಕರ

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಿಯದರ್ಶಿನಿ ಯೋಜನೆ ಪ್ರಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿರುವು ದರಿಂದ ಖಾಸಗಿ ಬಸ್‌ಗಳಿಗೆ ಉಂಟಾಗುತ್ತಿರುವ ನಷ್ಟ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಸರಕಾರ ಪರಿಹಾರ ಕಂಡುಕೊಳ್ಳದೇ ಇರುವುದನ್ನು ಪ್ರತಿಭಟಿಸಿ ಜುಲೈ.೬ರಂದು ಖಾಸಗಿ ಬಸ್‌ಗಳ ಸೇವೆಯನ್ನು ಮೊಟಕುಗೊಳಿಸಿ ಸೂಚನಾ ಮುಷ್ಕರ ಹಾಗೂ ಮಾರ್ಚ್ ನಡೆಸಲಾಗು ವುದೆಂದು ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಸಂಯುಕ್ತ ಟ್ರೇಡ್ ಯೂನಿಯನ್ ಪದಾಧಿ ಕಾರಿಗಳು ತಿಳಿಸಿದ್ದಾರೆ. ಖಾಸಗಿ ಬಸ್‌ಗಳ ದೈನಂದಿನ ಗಳಿಕೆಯಲ್ಲಿ ಕನಿಷ್ಠ 3000 ರೂ. ತನಕ ನಷ್ಟ ಉಂಟಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್ ಸಂಚಾರ ನಡೆಸುತ್ತಿರುವ ರೂಟ್‌ಗಳಲ್ಲಿ ಖಾಸಗಿ ಬಸ್‌ಗಳಿಗೆ ಕನಿಷ್ಠ ಇಂಧನಕ್ಕೆ ಅಗತ್ಯ ವಿರುವ ಗಳಿಕೆಯೂ ಉಂಟಾಗುತ್ತಿಲ್ಲ.

ತಲಪಾಡಿ ಮತ್ತು ಚಂದ್ರಗಿರಿ ರೂಟ್‌ಗಳಲ್ಲಿ ಖಾಸಗಿ ಬಸ್‌ಗಳಿಗೆ ಅತೀ ಹೆಚ್ಚು ನಷ್ಟ ಉಂಟಾಗುತ್ತಿದೆ. ಖಾಸಗಿ ಬಸ್ ಉದ್ದಿಮೆಯನ್ನು ಸಂರಕ್ಷಿಸಬೇ ಕೆಂಬ ಬೇಡಿಕೆ ಮುಂದಿರಿಸಿಕೊಂಡು ಬಸ್ ಆಪರೇಟರ್ಸ್ ಅಸೋಸಿಯೇ ಷನ್‌ನ ಜಿಲ್ಲಾ ಸಮಿತಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಅದಕ್ಕೆ ಸರಕಾರದಿಂದ ಯಾವುದೇ ರೀತಿಯ ಅನುಕೂಲಕರ ಕ್ರಮಗಳು ಉಂಟಾಗಿಲ್ಲ. ಅಂತಹ ನಿಲುವನ್ನು ಪ್ರತಿಭಟಿಸಿ, ಜುಲೈ 6ರಂದು ಬಸ್ ಮಾಲಕರು, ಕಾರ್ಮಿಕರು ಮತ್ತು ಅವರ ಕುಟುಂಬಗಳು ಕಲೆಕ್ಟರೇಟ್‌ಗೆ ಮಾರ್ಚ್, ಧರಣಿ ಮುಷ್ಕರ ನಡೆಸಲಿದ್ದಾರೆ.

ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣ ಸೌಕರ್ಯಕ್ಕಾಗಿ ಗುರುತು ಟೀಚಿ ಏರ್ಪಡಿಸಬೇಕು, ಉಚಿತ ಪ್ರಯಾಣವನ್ನು ದಿನಕ್ಕೆ ಎರಡು ಬಾರಿ ಯಾಗಿ ಮಾತ್ರ ಸೀಮಿತಗೊಳಿಸಬೇಕು, ಅಂತಾರಾಜ್ಯ ಟೌನ್-ಟು-ಟೌನ್ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಬಾರದು, ಕಾರ್ಮಿಕರ ಕಲ್ಯಾಣ ನಿಧಿಗಾಗಿರುವ ಪಾಲನ್ನು ಪೂರ್ಣವಾಗಿ ಸರಕಾರವೇ ಪಾವತಿಸ ಬೇಕು, ಖಾಸಗಿ ಬಸ್ ವಲಯವನ್ನು ಉದ್ದಿಮೆಯಾಗಿ ಅಂಗೀಕರಿಸಬೇಕು, ಖಾಸಗಿ ಬಸ್‌ಗಳನ್ನು ರಸ್ತೆ ತೆರಿಗೆಯಿಂದ ಪೂರ್ಣವಾಗಿ ಹೊರತುಪಡಿಸಬೇಕು, ಕೆಎಸ್‌ಆರ್‌ಟಿಸಿ ಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯಾಪ್ತಿಯನ್ನು ಕೇರಳ ರಾಜ್ಯದೊಳಗೆ ಮಾತ್ರವಾಗಿ ಸೀಮಿತಗೊಳಿಸಬೇಕು, ಡೀಸಲ್‌ಗೆ ಶೇ. 50ರಷ್ಟು ಸಬ್ಸಿಡಿ ನೀಡಬೇಕು, ಕೆಎಸ್‌ಆರ್‌ಟಿಸಿಯಲ್ಲಿ ಮಹಿಳಾ ಸರಕಾರೀ ಸಿಬ್ಬಂದಿಗಳನ್ನು ಉಚಿತ ಪ್ರಯಾಣ ಸೌಕರ್ಯದಿಂದ ಹೊರತುಪಡಿಸಿ, ವಿದ್ಯಾರ್ಥಿಗಳಿಗೆ ಹಾಗೂ ೬೫ಕ್ಕಿಂತ ಮೇಲ್ಪಟ್ಟ ಮಹಿಳೆಯರು ಮತ್ತು ಗಂಡಸರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಬಸ್ ಮಾಲಕರ ಸಂಘಟನೆ ಸರಕಾರಕ್ಕೆ ಸಲ್ಲಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು. ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್‌ನ ಜಿಲ್ಲಾಧ್ಯಕ್ಷ ಕೆ. ಗಿರೀಶ್, ಕಾರ್ಯದರ್ಶಿ ಟಿ. ಲಕ್ಷ್ಮಣನ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕೆ. ಗಿರಿಕೃಷ್ಣನ್, ಬಿ.ಎಂ.ಎಸ್. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾಹಿತಿ ನೀಡಿದರು.

You cannot copy contents of this page