ಕಾಸರಗೋಡು: ಭಾರತೀಯ ಮಜ್ದೂರ್ ಸಂಘ್ ಕಾಸರಗೋಡು ನಗರಸಭಾ ಸಮಿತಿ ಸಮ್ಮೇಳನ ಕಾಸರಗೋಡು ನಗರಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರಗಿದ್ದು, ಬಿಎಂಎಸ್ ವಲಯ ಅಧ್ಯಕ್ಷ ಬಾಲಕೃಷ್ಣ ನೆಲ್ಲಿಕುಂಜೆ ಉದ್ಘಾಟಿಸಿದರು. ಕೆ. ಕಮಲಾಕ್ಷ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್ ಪ್ರಧಾನ ಭಾಷಣ ಮಾಡಿದರು. ಮಧೂರು ಪಂ. ಸದಸ್ಯ ವಸಂತ, ನಗರಸಭಾ ಕೌನ್ಸಿಲರ್‌ಗಳಾದ ಕೆ.ಆರ್. ಹರೀಶ್, ಕೆ. ರೇಷ್ಮ ಶುಭ ಕೋರಿದರು. ಬಿಎಂಎಸ್ ನಗರಸಭಾ ಜೊತೆ ಕಾರ್ಯದರ್ಶಿ ಕೆ. ಸೌಮ್ಯ ವರದಿ ಮಂಡಿಸಿದರು. ಕೆ. ಗುರುದಾಸ್ ಸಂಘಟನಾ ಚರ್ಚೆ ನಿಯಂತ್ರಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ ಸಮಾರೋಪ ಭಾಷಣ ನಡೆಸಿದರು. ಆಧ್ವಿ ಬಿ.ಎಸ್. ವಂದೇ ಮಾತರಂ, ಬಾಬು ಮೋನ್ ಚೆಂಗಳ ಮಜ್ದೂರ್ ಗೀತೆ ಆಲಾಪಿಸಿದರು. ಕೆ. ಮನೋಜ್ ಸ್ವಾಗತಿಸಿ, ಕೆ. ಅರುಣ್ ವಂದಿಸಿದರು. ಅಧ್ಯಕ್ಷರಾಗಿ ಎ. ಕೇಶವ, ಉಪಾಧ್ಯಕ್ಷರಾಗಿ ಕಮಲಾಕ್ಷ, ವೀಣಾ ನೆಲ್ಲಿಕುಂಜೆ, ಚಿತ್ರಾ ಗಂಗಾಧರ, ಮೋಹನ್‌ದಾಸ್ ಕೊರಕ್ಕೋಡು, ಕಾರ್ಯದರ್ಶಿಯಾಗಿ ಮನೋಜ್ ಅಣಂಗೂರು, ಜೊತೆ ಕಾರ್ಯದರ್ಶಿಗಳಾಗಿ ಪ್ರಸಾದ್, ವಿನಿಲ್, ಸೌಮ್ಯ, ರಮೇಶ್ ಕಡಪ್ಪುರಂ, ಕೋಶಾಧಿಕಾರಿಯಾಗಿ ಕೆ. ಅರುಣ್, ಸದಸ್ಯರಾಗಿ ಅಶೋಕ್, ಆದರ್ಶ್, ಪ್ರಮೀಳಾ ಬೀರಂತಬೈಲ್, ಸ್ವಾತಿ ಕೊರಕ್ಕೋಡ್, ಗೋಪಾಲ್ ನೆಲ್ಲಿಕುಂಜೆ, ನವೀನ್, ಗಿರೀಶ್, ಜನಾರ್ಧನನ್ ಕಡಪ್ಪುರ ಆಯ್ಕೆಯಾದರು.







