ಕಾಸರಗೋಡು: ನಿವೃತ್ತ ಡಿಎಂಒ ಡಾ. ಯು.ಬಿ. ಕುಣಿಕುಳ್ಳಾಯ (89) ನಿಧನ ಹೊಂದಿದರು. ಕಾಞಂಗಾಡ್ ಕುನ್ನುಮ್ಮಲ್‌ನಲ್ಲಿ ವಾಸಿಸುತ್ತಿದ್ದರು. ಜಿಲ್ಲೆಯ ಹಿರಿಯ ಎಲುಬುರೋಗ ತಜ್ಞನಾಗಿದ್ದರು. ಮುಳ್ಳೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಕಲ್ಲಿಕೋಟೆ ಇಎಸ್‌ಐ ವೈದ್ಯಾಧಿಕಾರಿ, ಜಿಲ್ಲಾಸ್ಪತ್ರೆಯ ಸಿವಿಲ್ ಸರ್ಜನ್ ಮೊದಲಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕೆಜಿಎಂಒಎ, ಕಾಞಂಗಾಡ್ ಐಎಂಎ, ಜಿಲ್ಲಾ ಆರ್ಥೋ ಕ್ಲಬ್ ಅಧ್ಯಕ್ಷರಾಗಿದ್ದರು. ಬದಿಯಡ್ಕದ ಉಬ್ರಂಗಳ ಇವರ ಜನ್ಮಸ್ಥಳವಾಗಿದ್ದು, ತರವಾಡು ಮನೆಯ ಹಿತ್ತಿಲಲ್ಲಿ ಸಂಸ್ಕಾರ ನಡೆಸಲಾಗಿದೆ.
ಮೃತರು ಪತ್ನಿ ಡಾ| ಕೃಷ್ಣ ಕುಮಾರಿ, ಮಕ್ಕಳಾದ ಡಾ| ಸೀಮ ರಾವ್, ಡಾ| ಕೆ.ಯು. ರಾಘವೇಂದ್ರ ಪ್ರಸಾದ, ಸೊಸೆ ಡಾ| ಜೆ. ರಮ್ಯ, ಅಳಿಯ ಡಾ| ರಾಜೇಶ್ ರಾವ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರನಾದ ಯು. ವೆಂಕಟ್ರಮಣ ಕುಣಿಕುಳ್ಳಾಯ, ಸಹೋದರಿಯರಾದ ಸರಸ್ವತಿ ಬಳ್ಳುಳ್ಳಾಯ, ಲಕ್ಷ್ಮಿ ತಂತ್ರಿ ಈ ಹಿಂದೆ ನಿಧನ ಹೊಂದಿದ್ದಾರೆ.






