ರಬ್ಬರ್ ಶೀಟ್ ನಿರ್ಮಾಣ ಘಟಕದಲ್ಲಿ ಬೆಂಕಿ ಅನಾಹುತ: ಭಾರೀ ನಾಶನಷ್ಟ

ನೆಕ್ರಾಜೆ: ಇಲ್ಲಿಗೆ ಸಮೀಪದ ಆಲಂಕೂಡ್ಲುನಲ್ಲಿ ರಬ್ಬರ್ ಶೀಟ್ ನಿರ್ಮಾಣ ಘಟಕಕ್ಕೆ ಇಂದು ಮುಂಜಾನೆ ಬೆಂಕಿ ತಗಲಿ ಭಾರೀ ನಷ್ಟ ಉಂಟಾಗಿದೆ. ಲಕ್ಷ್ಮೀಶ ಬಳ್ಳುಳ್ಳಾಯ ಎಂಬವರ ಮನೆ ಪಕ್ಕದಲ್ಲಿ ಕಾರ್ಯವೆಸಗುತ್ತಿರುವ ಘಟಕದಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದೆ. ರಬ್ಬರ್ ಶೀಟ್‌ಗಳು, ಬಾಗಿಲುಗಳು ಮತ್ತಿತರ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಇದರಿಂದ ಸುಮಾರು ಎರಡು ಲಕ್ಷ ರೂ. ತನಕ ನಷ್ಟ ಉಂಟಾಗಿದೆ ಎಂದು ಈ ಘಟಕದ ಮಾಲಕರು ತಿಳಿಸಿದ್ದಾರೆ. ಬೆಂಕಿ ತಗಲಿದ ಬಗ್ಗೆ ನೀಡಲಾದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕ ದಳ  ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಈ ಘಟಕಕ್ಕೆ ಸಾಗಲು ಸರಿಯಾದ ರಸ್ತೆ ಸೌಕರ್ಯವಿಲ್ಲದೆ ಇರುವುದರಿಂದಾಗಿ ಬೆಂಕಿ ನಂದಿಸಲು ಅದು ಅಗ್ನಿಶಾಮಕ ದಳಕ್ಕೆ ತೀವ್ರ ತ್ರಾಸದಾಯಕವಾಗಿ ಪರಿಣಮಿಸಿತು.

RELATED NEWS

You cannot copy contents of this page