ವಿವಿಧ ಬೇಡಿಕೆ ಮುಂದಿರಿಸಿ ಕುಂಬಳೆ ವ್ಯಾಪಾರಿಗಳಿಂದ ಪಂಚಾಯತ್ ಕಚೇರಿಗೆ ಮಾರ್ಚ್, ಹರತಾಳ

ಕುಂಬಳೆ: ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕ, ಮರ್ಚೆಂಟ್ಸ್ ಯೂತ್ ವಿಂಗ್ ನೇತೃತ್ವದಲ್ಲಿ ಕುಂಬಳೆ ವ್ಯಾಪಾರಿಗಳು ಇಂದು ಬೆಳಿಗ್ಗೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕುಂಬಳೆ ಪಂಚಾಯತ್ ಕಚೇರಿಗೆ ಮಾರ್ಚ್  ನಡೆಸಿದರು. ಕುಂಬಳೆ ವ್ಯಾಪಾರಿ ಭವನದಿಂದ ಆರಂಭಗೊಂಡ  ವ್ಯಾಪಾರಿಗಳ ಮೆರವಣಿಗೆ ಪೇಟೆ ಸುತ್ತಿ ಪೊಲೀಸ್ ಠಾಣೆ ಮುಂದೆ ಸಮಾಪ್ತಿಗೊಂಡಿತು. ಕುಂಬಳೆ ಪೇಟೆಯ ಎಲ್ಲಾ ವ್ಯಾಪಾರಿಗಳು  ಮಾರ್ಚ್‌ನಲ್ಲಿ ಪಾಲ್ಗೊಂಡಿದ್ದಾರೆ. 

ಬದಿಯಡ್ಕ ಭಾಗದಿಂದ ಕುಂಬಳೆಗೆ ತಲುಪುವ ಬಸ್ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸುವ  ಕ್ರಮವನ್ನು ನಿಲ್ಲಿಸಬೇಕು, ಹಳೆಯ ಬಸ್ ನಿಲ್ದಾಣವನ್ನು ಪ್ರಯಾ ಣಿಕರಿಗಾಗಿ ತೆರೆದುಕೊಡಬೇಕು, ಪುನರ್ ನಿರ್ಮಾಣಕ್ಕಾಗಿ ಮುರಿದು  ತೆಗೆದ ಕುಂಬಳೆ ಬಸ್ ನಿಲ್ದಾಣವನ್ನು ಶೀಘ್ರ ನಿರ್ಮಿಸಬೇಕು, ವ್ಯಾಪಾರಿಗಳಿಗೆ ಪುನರ್ವಸತಿ ವ್ಯವಸ್ಥೆ ಏರ್ಪಡಿಸಬೇಕು, ಆಟೋ ರಿಕ್ಷಾಗಳಿಗೆ ಪಂಚಾಯತ್ ನೋಂದಾವಣೆ ಕಡ್ಡಾಯಗೊಳಿಸಬೇಕು,  ಟೇಕ್ ಎ ಬ್ರೇಕ್, ಮೀನುಮಾರುಕಟ್ಟೆ ಎಂಬಿವುಗಳನ್ನು ತೆರೆದುಕೊಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ವ್ಯಾಪಾರಿಗಳು ಇಂದು ಪಂಚಾಯತ್ ಕಚೇರಿಗೆ  ಮಾರ್ಚ್ ನಡೆಸಿದ್ದಾರೆ.ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕದ ಅಧ್ಯಕ್ಷ ರಾಜೇಶ್ ಮನಯತ್ತ್, ಪ್ರಧಾನ ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ, ಕೋಶಾಧಿಕಾರಿ ಅನ್ವರ್ ಸಿಟಿ, ಮರ್ಚೆಂಟ್ಸ್ ಯೂತ್ ವಿಂಗ್ ಕುಂಬಳೆ ಘಟಕದ ಅಧ್ಯಕ್ಷ ಅಶ್ರಫ್, ಪ್ರಧಾನ ಕಾರ್ಯದರ್ಶಿ ಹೈದರ್, ಕೋಶಾಧಿಕಾರಿ ಸಿದ್ದಿಕ್ ಮುಬಾರಕ್ ಮೊದಲಾದವರು ನೇತೃತ್ವ ನೀಡಿದರು. ಪಂಚಾಯತ್‌ಗೆ ಪ್ರತಿಭಟನಾ ಮಾರ್ಚ್‌ಗೆ  ಬೆಂಬಲ ಸೂಚಿಸಿ ಇಂದು ಮಧ್ಯಾಹ್ನವರೆಗೆ ವ್ಯಾಪಾರಿಗಳು ಕುಂಬಳಯಲ್ಲಿ ಅಂಗಡಿಗಳನ್ನು ಮುಚ್ಚಿ ಹರತಾಳ ಆಚರಿಸುತ್ತಿದ್ದಾರೆ. ಇದೇ ವೇಳೆ ಖಾಸಗಿ ಬಸ್ ಮುಷ್ಕರ ಕೂಡಾ ಇಂದು  ನಡೆಯುತ್ತಿರುವುದರಿಂದ ಕುಂಬಳೆ ಪೇಟೆಯಲ್ಲಿ ಜನಸಂಖ್ಯೆ ಭಾರೀ ಕಡಿಮೆ ಕಂಡುಬಂದಿದೆ.

RELATED NEWS

You cannot copy contents of this page