ಮುಳ್ಳೇರಿಯ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಕಾರಡ್ಕ ಚಂದನಡ್ಕ ನಿವಾಸಿ ಆರ್.ಟಿ. ಬಾಲನ್ ಎಂದೇ ಕರೆಸಿಕೊಂಡಿದ್ದ ಬಾಲಕೃಷ್ಣನ್ (72) ನಿಧನ ಹೊಂದಿದರು. ಅಗ್ನಿಶಾಮಕದಳ ದಲ್ಲಿ ಪಾರ್ಟ್‌ಟೈಮ್ ನೌಕರನಾಗಿದ್ದರು. ಕಾರಡ್ಕ ಪರಿಸರದ ಸಾಂಸ್ಕೃತಿಕ ರಂಗದಲ್ಲಿ ಸಕ್ರಿಯರಾಗಿದ್ದ ಇವರು ಕಾಡಗಂ ಫ್ರೆಂಡ್ಸ್ ಕಂಬೈನ್ಸ್ ಎಂಬ ನಾಟಕ ತಂಡವನ್ನು ರೂಪೀಕರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೃತರು ತಾಯಿ ಕುಂಬ, ಪತ್ನಿ ಸಿ.ಶಾಂತ, ಮಕ್ಕ ಳಾದ ಪ್ರಶಾಂತ್, ಪ್ರಸೀತ, ಸಹೋ ದರರಾದ ಅಂಬುಕ್ಕನ್ ಮುಳ್ಳೇರಿಯ, ಕಿಟ್ಟನ್ ಕೂಡ್ಲು, ನಾರಾಯಣನ್ ಪುದಿಯವಳಪ್, ಗೋಪಾಲನ್ ಕೋಡೋತ್, ಕುಂಞಿರಾಮನ್ ಚಂದನಡ್ಕ, ಸಹೋದರಿಯರಾದ ಪೊನ್ನಮ್ಮ ಕೊಳತ್ತೂರು, ಅಮ್ಮಾಳು ಕುಂಡುಚ್ಚಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







