ಕಾಸರಗೋಡು: ಕಲ್ಲಿಕೋಟೆ ಆರ್‌ಇಸಿಯಲ್ಲಿ ತುರ್ತು ಪರಿಸ್ಥಿತಿ ವೇಳೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಧ್ಯಾಪಕರಾಗಿದ್ದ ಚೌಕಿ ಕೆ.ಕೆ.ಪುರ ನಿವಾಸಿ ಪ್ರೊ. ಕೆ.ಕೆ. ಅಬ್ದುಲ್ ಗಫಾರ್ (89) ನಿಧನ ಹೊಂದಿದರು. ತುರ್ತುಪರಿಸ್ಥಿತಿ ಕಾಲದಲ್ಲಿ ಈ ಕಾಲೇಜಿನ ವಿದ್ಯಾರ್ಥಿ ಹಾಗೂ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಕಸ್ಟಡಿಗೆ ತೆಗೆದು ಕೊಲೆಗೈದು ನಿಗೂಢವಾಗಿ ಸಂಸ್ಕರಿಸಿರುವುದಾಗಿ ಈಗಲೂ ಆರೋಪಿಸಲಾಗುತ್ತಿರುವ ರಾಜನ್ ಎಂಬ ವಿದ್ಯಾರ್ಥಿಯ ಅಧ್ಯಾಪಕನೂ ಹಾಗೂ ಆ ಪ್ರಕರಣದ ಸಾಕ್ಷಿಯಾಗಿದ್ದರು. ಭಟ್ಕಳ್ ಇಂಜಿನಿಯ ರಿಂಗ್ ಕಾಲೇಜಿನ ಪ್ರಾಂಶುಪಾಲರಾ ಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಉಮ್ಮುಲ್ ಬರ್ಕತ್ ಜಮೀಲ, ಮಕ್ಕಳಾದ ಫರೀದ ಗಫಾರ್, ಡಾ| ಜಮಾಲುನ್ನಿಸ ಗಫಾರ್, ಶಾನವಾಸ್ ಗಫಾರ್, ಡಾ| ಶಾಜಿರ್ ಗಫಾರ್, ಅಳಿಯಂದಿರು, ಸೊಸೆಯಂದಿರು, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







