ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಗೋಪಾಲ ಚೆಟ್ಟಿಯಾರ್ ವಿಧಿವಶ
ಬಂದ್ಯೋಡು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಕಾರ್ಯಕರ್ತ ಗೋಪಾಲ ಚೆಟ್ಟಿಯಾರ್ ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆ ಯೊಂದರಲ್ಲಿ ದೈವಾಧೀನರಾಗಿದ್ದಾರೆ.
ಆರ್ಎಸ್ಎಸ್ನ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್, ಕರ್ನಾಟಕ ದಕ್ಷಿಣ ಪ್ರಾಂತ್ಯ ಸೇವಾ ಪ್ರಮುಖ್ ಹಾಗೂ ಮಂಗಳೂರು ವಿಭಾಗ ಸಂಘ ಚಾಲಕರಾಗಿಯೂ ಸೇವೆ ಸಲ್ಲಿಸಿರುವ ಗೋಪಾಲ ಚೆಟ್ಟಿಯಾರ್ ಅವರಿಗೆ ೭೭ ವರ್ಷ ವಯಸ್ಸಾಗಿತ್ತು.
ಮೂಲತಃ ಪೆರ್ಲ ನಿವಾಸಿ ಯಾಗಿರುವ ಗೋಪಾಲ ಚೆಟ್ಟಿಯಾರ್ ಅವರು ಕೃಷ್ಣ ಚೆಟ್ಟಿಯಾರ್- ಶ್ರೀದೇವಿ ದಂಪತಿಯ ಪುತ್ರನಾಗಿದ್ದಾರೆ. ಮೃತರು ಪತ್ನಿ ಸುಮತಿ, ಮಕ್ಕಳಾದ ಕೃಷ್ಣರಾಜ್ (ಬ್ಯಾಂಕ್ ಉದ್ಯೋಗಿ), ಕೃಷ್ಣಮೋಹನ್ (ಬೆಂಗಳೂರು), ಸುಮನ, ಅಳಿಯ-ಸೊಸೆಯಂದಿರಾದ ಸುನಿಲ್, ರಾಜಲಕ್ಷ್ಮಿ, ನಿಮಿತ, ಸಹೋದರಿಯರಾದ ವಸಂತಿ, ಪಾರ್ವತಿ, ಜಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಮಾಧವ ಚೆಟ್ಟಿಯಾರ್, ಸಹೋದರಿ ಕಲ್ಯಾಣಿ ಈ ಹಿಂದೆ ನಿಧನರಾಗಿದ್ದಾರೆ.
ಕೇರಳ ಕಂದಾಯ ಇಲಾಖೆಯಲ್ಲಿ ಕಳೆದ ೩೫ ವರ್ಷಗಳಿಂದ ಸೇವೆ ಸಲ್ಲಿಸಿದ್ದ ಗೋಪಾಲ ಚೆಟ್ಟಿಯಾರ್ ಅವರು ಕೊನೆಗೆ ೨೦೦೨ರಲ್ಲಿ ಉಪ ತಹಶೀ ಲ್ದಾರ್ ಆಗಿ ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದರು. ಬಳಿಕ ಅವರು ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮಾ ಜಸೇವೆ ಗಾಗಿಯೇ ಮೀಸಲಿರಿಸಿದ್ದರು. ಗೋಪಾಲ ಚೆಟ್ಟಿಯಾರ್ ಕುಂಬಳೆ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಅಧ್ಯಕ್ಷರಾಗಿ ದೀರ್ಘಕಾಲ ಸೇವೆಸಲ್ಲಿಸಿದ್ದರು.