ತಲೆ ಹಾಗೂ ಕುತ್ತಿಗೆ ಓಂಕಾಲಜಿ ವಿಭಾಗ ಕಾಸರಗೋಡು ಆಸ್ಟರ್ ಮಿಮ್ಸ್‌ನಲ್ಲಿ ಆರಂಭ

ಕಾಸರಗೋಡು: ತಲೆ ಹಾಗೂ ಕುತ್ತಿಗೆಯ ಕ್ಯಾನ್ಸರ್ ಬಾಧಿತರಿಗೆ ಕಾಸರಗೋಡು ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ತಜ್ಞ ಚಿಕಿತ್ಸೆಗೆ ಅತ್ಯಾಧುನಿಕ ಓಂಕಾಲಜಿ ವಿಭಾಗ ಆರಂಭಗೊಂಡಿದೆ. ಡಿಪಾರ್ಟ್‌ಮೆಂಟ್ ಮುಖ್ಯಸ್ಥ ಡಾ| ಶೋನ್ ಟಿ. ಜೋಸೆಫ್ ಉದ್ಘಾಟಿಸಿದರು. ಚೀಫ್ ಆಪರೇಟಿಂಗ್ ಅಧಿಕಾರಿ ಸುಧೀರ್ ಬಾಸುರಿ, ಕ್ರಿಟಿಕಲ್ ಕೇರ್ ಮೇಧಾವಿ ಡಾ| ಸಾಜಿದ್ ಸಲಾಹುದ್ದೀನ್, ಸರ್ಜಿಕಲ್ ಓಂಕಾಲಜಿ ಆಸೋಸಿಯೇಟ್ ಕನ್ಸಲ್‌ಟೆಂಟ್ ಡಾ| ಅರವಿಂದ್ ಎನ್., ಹೆಡ್ ಆಂಡ್ ನೆಕ್ ಓಂಕಾಲಜಿ ಅಸೋಸಿಯೇಟ್ ಕನ್ಸಲ್‌ಟೆಂಟ್ ಡಾ| ಸೌರಭ್ ಪದ್ಮನಾಭನ್ ಭಾಗವಹಿಸಿದರು. ಅಂತಾರಾಷ್ಟ್ರ ಗುಣಮಟ್ಟವಿರುವ ರೋಗ ನಿರ್ಣಯದಿಂದ ಆರಂಭಿಸಿ ಪುನರ್ವಸತಿವರೆಗಿರುವ ಎಲ್ಲಾ ಹಂತಗಳನ್ನು ಒಳಪಡಿಸಿದ ಸಮಗ್ರವಾದ ತಜ್ಞ ಆರೈಕೆ ಹೊಸತಾಗಿ ಆರಂಭಿಸಲಾಗಿದೆ. ಬಾಯಿ ಹಾಗೂ ಧ್ವನಿ ಪೆಟ್ಟಿಗೆ ಕ್ಯಾನ್ಸರ್, ಥೈರೋಯ್ಡ್, ಜೊಲ್ಲುರಸ ಗ್ರಂಥಿಗಳ (ಪರೋಟಿಡ್) ಗಡ್ಡೆಗಳು ಎಂಬಿವುಗಳಿಗಿರುವ ಸಂಕೀರ್ಣ ಶಸ್ತ್ರ ಚಿಕಿತ್ಸೆಗಳು ಈ ವಿಭಾಗದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಳಿಗೆ ೯೧ ೭೦೩೪೦೦೧೧೧೧ರಲ್ಲಿ ಸಂಪರ್ಕಿಸಬಹುದು.

RELATED NEWS

You cannot copy contents of this page