ಕಾಲ್ನಡೆ ದಾರಿಗೆ ಮುರಿದು ಬಿದ್ದ ಮರ: ಸಂಚಾರ ಸಮಸ್ಯೆ:ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣ ಸಹಿತ ಮಂಜೇಶ್ವರ ಪೇಟೆ, ಶಾಲಾ-ಕಾಲೇಜುಗಳು, ಸ್ಥಳೀಯಾ ಡಳಿತ ಕಚೇರಿ, ಮೃಗಾಸ್ಪತ್ರೆಗಳಿಗೆ ತಲುಪಲು ಹತ್ತಿರದ ಕಾಲ್ನಡಿಗೆ ರಸ್ತೆಯಲ್ಲಿ ಸಂಪೂರ್ಣವಾಗಿ ಸಂಚಾರ ಮೊಟಕುಗೊಂಡಿದೆ. ರಸ್ತೆಗೆ ಅಡ್ಡವಾಗಿ ಬಿದ್ದಿರುವ ಬೃಹತ್ ಮರವನ್ನು ತೆರವುಗೊಳಿಸಲು ತಿಂಗಳು ಕಳೆದರೂ ಸಂಬAಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ಗಳು, ಸರಕಾರಿ ಕಚೇರಿ ಸಿಬ್ಬಂದಿಗಳು ಹಾಗೂ ರೈಲ್ವೇ ಪ್ರಯಾಣಿಕರು ಸೇರಿ ದಂತೆ ನೂರಾರು ಮಂದಿ ಪ್ರತಿದಿನ ಬಳಸುವ ಕಿರುದಾರಿ ಇದಾಗಿದ್ದು, ಬಿದ್ದಿರುವ ಮರದಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರೊಂದಿಗೆ ರಸ್ತೆಯ ಎರಡೂ ಬದಿಗಳಲ್ಲಿ ದಟ್ಟವಾಗಿ ಬೆಳೆದಿರುವ ಪೊದೆಗಳಿಂದಾಗಿ ದಾರಿಯೇ ಕಾಣದಂತಾಗಿದೆ. ಪೊದೆಗಳ ನಡುವೆ ವಿಷಜಂತುಗಳು ಕಾಣಿಸಿಕೊಳ್ಳುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ದಟ್ಟವಾದ ಪೊದೆಗಳಿಂ ದಾಗಿ ಹಗಲು ಹೊತ್ತಿನಲ್ಲಿಯೂ ಈ ದಾರಿಯಲ್ಲಿ ಸಂಚರಿಸಲು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಬಿದ್ದಿರುವ ಮರವನ್ನು ಕೂಡಲೇ ತೆರವುಗೊಳಿಸಿ, ರಸ್ತೆಯ ಬದಿಯಲ್ಲಿರುವ ಪೊದೆಗಳನ್ನು ಕಡಿದು ಸಾರ್ವಜನಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಪರಿಸರದ ನಿವಾಸಿಗಳು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page