ವರ್ಕಾಡಿ ಸೆಕ್ಷನ್ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಮುಸ್ಲಿಂ ಲೀಗ್ ಪಂ. ಸಮಿತಿ ಸಭೆ ಒತ್ತಾಯ

ವರ್ಕಾಡಿ: ವರ್ಕಾಡಿ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ ಸಮಿತಿ ಸಭೆ ಒತ್ತಾಯಿಸಿದೆ. ವಿದ್ಯುತ್ ಇಲಾಖೆಯ ಸಿಬ್ಬಂದಿಗಳಲ್ಲಿ ಕೆಲವರು ತೋರುವ ನಿರ್ಲಕ್ಷ್ಯ ಕೂಡಲೇ ಕೊನೆಗೊಳಿಸ ಬೇಕು, ಇಲ್ಲದಿದ್ದರೆ ಸಾರ್ವಜನಿಕರನ್ನು ಸಂಘಟಿಸಿ ಹೋರಾಟ ನಡೆಸಲಾಗು ವುದು ಎಂದು ಸಭೆ ಎಚ್ಚರಿಕೆ ನೀಡಿದೆ.
ಕೆಲವು ಪ್ರದೇಶಗಳಲ್ಲಿ ಹಲವು ದಿನಗಳಿಂದ ವಿದ್ಯುತ್ ಇಲ್ಲದಿದ್ದರೂ, ಗ್ರಾಹಕರಿಗೆ ಸಮರ್ಪಕ ಮಾಹಿತಿ ನೀಡದೆ ಮೋಸಗೊಳಿಸಲಾಗುತ್ತಿದೆ ಎಂದು ಸಭೆ ಆರೋಪಿಸಿತು. ಈ ಕುರಿತು ರಾಜ್ಯ ವಿದ್ಯುತ್ ಸಚಿವ, ಶಾಸಕರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಸಾರಿಗೆ ಇಲಾಖೆಯ ಬಸ್ ಸಂಚಾರ ಆರಂಭಿಸುವAತೆ ಸಾರಿಗೆ ಸಚಿವರಿಗೆ ಶಾಸಕರ ಮುಖಾಂತರ ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಕೇರಳ ಪ್ರವಾಸಿ ಲೀಗ್ ಸದಸ್ಯತ್ವ ಅಭಿಯಾನಕ್ಕೆ ಪ್ರವಾಸಿ ಲೀಗ್ ಪದಾಧಿಕಾರಿಗಳಾದ ರೆÀÄÄsಡ್.ಎ ಮೊಗ್ರಾಲ್, ಎ.ಆರ್. ಕಂಡತ್ತಾಡ್ ಹಾಗೂ ಬದ್ರುದ್ದೀನ್ ಕಂಡತ್ತಿಲ್ ಚಾಲನೆ ನೀಡಿದರು.
ಕೆ. ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಬಿ.ಎ. ಸ್ವಾಗತಿಸಿದರು. ಪಿ.ಬಿ. ಅಬೂಬಕ್ಕರ್ ಪಾತೂರು, ಮೂಸ ಹಾಜಿ ತೋಕೆ, ಎ.ಕೆ. ಖಾಲಿದ್ ದುರ್ಗಿಪಳ್ಳ, ಹಾಜಿ ಉಮರಬ್ಬ ಆನೆಕಲ್ಲು, ಮೂಸ ಕೆದುಂಬಾಡಿ, ವಿ.ಎಸ್. ಮೊಹಮ್ಮದ್ ಧರ್ಮನಗರ, ಸಿದ್ದೀಕ್ ಬದಿಯಾರ್, ಫಾತಿಮತ್ ನಸೀಮಾ, ನಾರಾಯಣ, ಕುಂಞÁಮಿನ, ಖಲೀಲ್ ಸಿ.ಎಂ. ನಗರ, ಇಬ್ರಾಹಿಂ ಹಾಜಿ ಕೊಮ್ಮಂಗುದಿ, ಬದ್ರುದ್ದೀನ್ ಪಾವೂರು, ರಜಾಕ್ ಕೆದುಂಬಾಡಿ, ಮುತ್ತಲಿಬ್ ಕೆದುಂಬಾಡಿ, ಲತೀಫ್ ತೋಕೆ, ಅಬ್ಬು ಕಲ್ಮಿಂಜ , ಹಾರಿಸ್ ಬದ್ರಿ ಖಜೆ, ಎನ್.ಎಂ. ಮೊಯ್ದೀನ್ ಹಾಜಿ ಪಾತೂರು, ಪಿ.ಬಿ.ಎ. ಖರೀಮ್, ಪಿ.ಪಿ ಅಬ್ದುಲ್‌ಕಾದರ್ ಮುಸ್ಲಿಯಾರ್, ಮೊಯ್ದೀನ್ ನಂದರಬೈಲು, ಕೆ.ಎಂ. ಅಶ್ರಫ್ ನಡಿಬೈಲ್, ಅಹ್ಮದ್ ಮೂನು ಓಡಂಗಳ ಹಾಗೂ ಹಾರೂನ್ ರಶೀದ್ ಧರ್ಮನಗರ, ಲತೀಫ್ ಪೊಯ್ಯೆ ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED NEWS

You cannot copy contents of this page