ಕಾಸರಗೋಡು: ಕೇರಳದಲ್ಲಿ ಸ್ಥಾಪಿಸಲಾಗುವ ಏಮ್ಸ್ ಆಸ್ಪತ್ರೆಯ ಪ್ರಸ್ತಾವನೆ ಪಟ್ಟಿಯಲ್ಲಿ ಕಾಸರಗೋಡು ಜಿಲ್ಲೆಯನ್ನು ಒಳಪಡಿಸಬೇಕೆಂದು ಸಂಸತ್ನ ಮಳೆಗಾಲದ ಅಧಿವೇಶನದ ಪೂರ್ವಭಾವಿಯಾಗಿ ರಾಜ್ಯ ಸರಕಾರ ತಿರುವನಂತಪುರದಲ್ಲಿ ಕರೆದ ಕೇರಳದ ಸಂಸದರ ಸಭೆಯಲ್ಲಿ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಆಗ್ರಹಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯನ್ನು ಒಳಪಡಿಸಿ ಪ್ರಸ್ತಾವನೆ ಯನ್ನು ಕೇಂದ್ರಕ್ಕೆ ಸಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಏಮ್ಸ್ ಪಟ್ಟಿಯಲ್ಲಿ ಕಾಸರಗೋ ಡನ್ನು ಒಳಪಡಿಸದೇ ಇರುವುದು ಜಿಲ್ಲೆಯೊಂದಿಗೆ ತೋರುತ್ತಿರುವ ಅವಗಣನೆಯ ಮುಂದುವರಿಕೆ ಯಾಗಿದೆ. ಏಮ್ಸ್ ಸ್ಥಾಪಿಸಲು ಅನುಕೂಲಕರವಾದ ೨೦೦೦ ಎಕ್ರೆಯಷ್ಟು ಸರಕಾರಿ ಭೂಮಿ ಪುಲ್ಲೂರುಪೆರಿಯ ಪಂಚಾಯತ್ನಲಿ ದೆಯೆಂದು ಸಂಸದ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು, ಬೇವಿಂಜೆ ಮತ್ತು ವೀರಮಲಕುನ್ನುನಲ್ಲಿ ಸಂಭವಿಸುತ್ತಿರುವ ಭೂಕುಸಿತವನ್ನು ತಡೆಯಲು ಕ್ರಮ ಕೈಗೊಳ್ಳಬೇಕಾಗಿದೆ. ಎಂಡೋಸಲ್ಫಾನ್ ಸಂತ್ರಸ್ತರ ಸಂಕಷ್ಟಗಳಿಗೆ ಪರಿಹಾರಕಂಡು ಕೊಳ್ಳಬೇಕು, ಆರಿಕ್ಕಾಡಿ ಟೋಲ್ ಪ್ಲಾಸ್ ಬಳಿಯ ಹಂಪ್ಗಳು, ಡಿವೈಡ ರ್ಗಳು, ಸೂಚನಾ ಫಲಕಗಳನ್ನು ತೆರವುಗೊಳಿಸಬೇಕು, ನೀಲೇಶ್ವರವನ್ನು ಪರಂಪರಾಗತ ನಗರವನ್ನಾಗಿ ಘೋಷಿಸಬೇಕು ಮೊದಲಾದ ಬೇಡಿಕೆಗಳನ್ನು ಸಂಸದ ಸಭೆಯ ಮುಂದಿರಿಸಿದ್ದಾರೆ.






