ಕಾಸರಗೋಡು: ರಾಜ್ಯ ಕೃಷಿ ಪ್ರಶಸ್ತಿಗಿರುವ ಅರ್ಜಿಗಳನ್ನು ಈತಿಂಗಳ 13ರವರೆಗೆ ಸಂಬಂಧಪಟ್ಟ ಕೃಷಿಭವನಗಳಲ್ಲಿ ಸಲ್ಲಿಸಬಹುದು. ಕೃಷಿವಲಯದ ಸಮಗ್ರ ಕೊಡುಗೆಗಳಿಗೆ ಗೌರವ ಸೂಚಿಸಿ 5 ಲಕ್ಷ ರೂ. ಬಹುಮಾನ ಮೊತ್ತವಿರುವ ಉಮ್ಮನ್‌ಚಾಂಡಿ ಸ್ಮಾರಕ ಪ್ರಶಸ್ತಿ ಸಹಿತ 39 ವಿಭಾಗಗಳಲ್ಲಾಗಿ 2025ರ ರಾಜ್ಯ ಕೃಷಿ ಪ್ರಶಸ್ತಿಗಳಿಗೆ ಸರಕಾರ ಅಂಗೀಕಾರ ನೀಡಿದೆ. ಇದರ ಜೊತೆಯಲ್ಲೇ ತಾರಸಿ ಕೃಷಿ ಮಾಡುವ ಉತ್ತಮ ಕೃಷಿಕನಿಗೆ (ಛಿbಟಿ ಖ್ಟ್ಟಜಿಡ್ಟಿo Ibme), ಉದ್ಯಾನಶ್ರೇಷ್ಠ ಎಂಬೀ ಎರಡು ವಿಭಾಗಗಳು (5೦,೦೦೦ ರೂ.ನಂತೆ ಫಲಕ, ಪ್ರಮಾಣಪತ್ರ) ಒಳಗೊಂಡಿದೆ.
ರಾಜ್ಯ ಕೃಷಿ ಪ್ರಶಸ್ತಿಗಳಲ್ಲಿ ಕೃಷಿವಲಯದಲ್ಲಿನ ಉತ್ತಮ ಚಟುವಟಿಕೆ ನಡೆಸುವ ಸ್ಥಳೀಯಾಡಳಿತ ಸಂಸ್ಥೆಗಿರುವ ಸಿ. ಅಚ್ಯುತ ಮೆನೊನ್ ಸ್ಮಾರಕ ಪ್ರಶಸ್ತಿ (1೦ ಲಕ್ಷ), ಉತ್ತಮ ಕೃಷಿಭವನಕ್ಕಿರುವ ವಿ.ವಿ. ರಾಘವನ್ ಸ್ಮಾರಕ ಪ್ರಶಸ್ತಿ (5ಲಕ್ಷ), ಪದ್ಮಶ್ರೀ ಕೆ., ವಿಶ್ವನಾಥನ್ ಸ್ಮಾರಕ ಭತ್ತ ಕದಿರು ಪ್ರಶಸ್ತಿ (೩ಲಕ್ಷ), ಸಿಬಿ ಕಲ್ಲಿಂಗಲ್ ಸ್ಮಾರಕ ಕೃಷಿಕೋತ್ತಮ ಪ್ರಶಸ್ತಿ (೨ಲಕ್ಷ), ಕೇರ ಕೇಸರಿ (2 ಲಕ್ಷ), ಬೀಜ ಸಂರಕ್ಷಣೆ ಚಟುವಟಿಕೆಗಳನ್ನು ನಡೆಸುವ ಬುಡಕಟ್ಟು ಉನ್ನತಿ, ಸಂಘಕ್ಕಿರುವ ಪ್ರಶಸ್ತಿ (೨ ಲಕ್ಷ), ಉತ್ತಮ ಸಾವಯವ ಕೃಷಿಕ (2 ಲಕ್ಷ) ಎಂಬಿವು ಸಹಿತ ವಿವಿಧ ವಿಭಾಗಗಳಲ್ಲಾಗಿ ಪ್ರಶಸ್ತಿಗಳನ್ನು ನೀಡಲಾಗುವುದು.
ಪ್ರಶಸ್ತಿಗಳನ್ನು ಆಗಸ್ಟ್ 17ರಂದು ನಡೆಯುವ ರಾಜ್ಯ ಕೃಷಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು. ಅರ್ಜಿ ಫಾರ್ಮ್ ಹಾಗೂ ಹೆಚ್ಚಿನ ಮಾಹಿತಿಗಳು ಸಂಬಂಧಪಟ್ಟ ಕೃಷಿ ಭವನಗಳಿಂದ ಲಭಿಸುವುದು. ಢಿಢಿಢಿ.ebಟbbಟಡ್ಡ್ಠಿe.qs.ಟಿ.






